Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ನಡೆದಾಡುತ್ತಿದ್ದ ಯುವತಿಯನ್ನು ತಬ್ಬಿ ಮಾಡಬಾರದ್ದನ್ನು ಮಾಡಿದ ಯುವಕ: ವಿಡಿಯೋ

Krishnaveni K
ಸೋಮವಾರ, 7 ಏಪ್ರಿಲ್ 2025 (11:39 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಾಡುತ್ತಿದ್ದ ಯುವತಿಯನ್ನು ಯುವಕನೊಬ್ಬ ಬಾಚಿ ತಬ್ಬಿಕೊಂಡು ಲೈಂಗಿಕವಾಗಿ ಕಿರುಕುಳ ಕೊಟ್ಟ ಘಟನೆ ನಡೆದಿದೆ. ಈ  ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆ ಏಪ್ರಿಲ್ 2 ರಂದು ತಡರಾತ್ರಿ 1.52 ರ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಬಿಟಿಎಂ ಲೇಔಟ್ ನಲ್ಲಿ ಘಟನೆ ನಡೆದಿದೆ. ಯುವತಿ ತನ್ನ ಗೆಳತಿಯೊಂದಿಗೆ ನಡೆದುಕೊಂಡು ಗಲ್ಲಿಯೊಂದರಲ್ಲಿ ತೆರಳುತ್ತಿದ್ದಾಳೆ.

ಈ ವೇಳೆ ಹಿಂದಿನಿಂದಲೇ ಬರುವ ಯುವಕ ಆಕೆಯನ್ನು ಹಿಡಿದೆಳೆಯುತ್ತಾನೆ. ಯುವತಿ ತೀವ್ರವಾಗಿ ಪ್ರತಿರೋಧ ತೋರಿಸುತ್ತಿದ್ದರೂ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು ಕಿಸ್ ಮಾಡಲು ಯತ್ನಿಸುತ್ತಾನೆ. ಈ ವೇಳೆ ಯುವತಿಯ ಗೆಳತಿ ಬಿಡಿಸಲು ಹೋಗುತ್ತಾಳೆ. ಯುವತಿ ಕೆಳಕ್ಕೆ ಬಿದ್ದಿರುತ್ತಾಳೆ.

ಕೊನೆಗೆ ಯುವತಿಯನ್ನು ಬಿಟ್ಟು ಆರೋಪಿ ಪರಾರಿಯಾಗುತ್ತಾನೆ. ಆದರೆ ಯುವತಿ ತಾನಾಗಿಯೇ ದೂರು ನೀಡಲು ಹೋಗಿರುವುದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೇ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments