ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್‌ಗೆ ಆರ್‌ಸಿಬಿ ಇಂದು ತರವರಿನಲ್ಲಿ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ತಮ್ಮನ್ನು ಆರ್‌ಸಿಬಿಯಿಂದ ಕೈಬಿಟ್ಟಿದ್ದಕ್ಕೆ ತಮ್ಮ ಬೌಲಿಂಗ್ ಮೂಲಕವೇ ಸಿರಾಜ್ ತಿರುಗೇಟು ನೀಡಿದ್ದಾರೆ.
ಕಳೆದ ವರ್ಷದವರೆಗೆ ಆರ್‌ಸಿಬಿ ಪರ ಆಟವಾಡಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ಕೈಬಿಡಲಾಯಿತು. ಇದರಿಂದ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಗುಜರಾತ್ ಟೈಟಾನ್ಸ್ ಪಡೆಯನ್ನು ಸೇರಿಕೊಂಡರು. ಈ ಐಪಿಎಲ್ 2025ರ ಆವೃತ್ತಿಯಲ್ಲಿ ಗುಜರಾತ್ ಪಡೆಯನ್ನು ಮೊದಲ ಬಾರಿ ಆರ್‌ಸಿಬಿ ಇಂದು ತವರಿನಲ್ಲಿ ಎದುರಿಸಿತು. ಬೌಲಿಂಗ್ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡ ಸಿರಾಜ್ ಅವರು ವಿರಾಟ್‌ಗೆ ಬೌಲಿಂಗ್ ಮಾಡುವ ವೇಳೆ ಎದುರಿಸಿದ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದುವರೆಗೆ ಒಂದೇ ತಂಡದಲ್ಲಿ ಆಟವಾಡಿ, ಉತ್ತಮ ಸ್ನೇಹಿತರಾಗಿರುವ ಕೊಹ್ಲಿ ಹಾಗೂ ಸಿರಾಜ್ ಇಂದು ಮುಖಾಮುಖಿಯಾದರು. ಬೆಳಿಗ್ಗಿನ ಪ್ರಾಕ್ಟೀಸ್ ವೇಳೆಯೂ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡುವ ವೇಳೆ ಸಿರಾಜ್ ಅವರು ಎದುರಿಸಿದ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಹ್ಲಿಗೆ ಬೌಲಿಂಗ್ ಮಾಡುವ ವೇಳೆ ಸಿರಾಜ್ ಅವರು ಚಂಚಲರಾಗುತ್ತಾರೆ. ಬಾಲ್ ಎಸೆಯಲು ಓಡಿಬಂದ ಸಿರಾಜ್, ವಿರಾಟ್ ನೋಡುತ್ತಿದ್ದ ಹಾಗೇ ತಮ್ಮ ಏಕಾಗ್ರತೆಯನ್ನು ಕಳೆದುಕೊಂಡು ವಾಪಾಸ್ಸಾಗುತ್ತಾರೆ. ಬೆಸ್ಟೆ ಫ್ರೆಂಡ್ಸ್ ಆಟದ ವೇಳೆ ಮುಖಾಮುಖಿಯಾದಾಗ ಇದೇ ಸಂದರ್ಭ ಎದುರಾಗುತ್ತದೆ ಎಂದು ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.