ಬೆಂಗಳೂರು: ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯಾಟದಲ್ಲಿ ಗುಜರಾತ್ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದೆ. ತವರಿನ ಅಂಗಳದಲ್ಲಿ ಆರ್‌ಸಿಬಿ ಮೊದಲ ಪಂದ್ಯವನ್ನು ಎದುರಿಸಲಿದೆ.
ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಶುಭ್‌ಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ರಜತ್ ಪಾಟಿದಾರ್ ಪಡೆ ಮೊದಲು ಬ್ಯಾಟಿಂಗ್ ಅನ್ನು ಎದುರಿಸಲಿದೆ.
ಇನ್ನೂ 2ನೇ ಗೆಲುವನ್ನು ಪಡೆಯುವಲ್ಲಿ ಗುಜರಾತ್ ಭಾರೀ ಪ್ಲಾನ್‌ನೊಂದಿಗೆ ಬಂದಿದೆ. ಈಗಾಗಲೇ ನಡೆದ ಎರಡು ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೂರನೇ ಗೆಲುವಿನ ಆಶಯದಲ್ಲಿ ಆರ್‌ಸಿಬಿ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುವುದರಿಂದ ಈ ಪಂದ್ಯವು ರೋಮಾಂಚಕವಾಗಿರಲಿದೆ. RCB ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತದೆಯೇ ಅಥವಾ GT ಆಘಾತ ನೀಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.