Publish Date: Mon, 09 Jun 2025 (16:50 IST)
Updated Date: Mon, 09 Jun 2025 (16:53 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆ ಶುರುವಾಗಿದೆ. ಇಂದು ಅಪರಾಹ್ನದ ನಂತರ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇನ್ನೆಷ್ಟು ದಿನ ಇರುತ್ತದೆ ಇಲ್ಲಿದೆ ನೋಡಿ ಹವಾಮಾನ ವರದಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೇ ಕೊನೆಯ ವಾರದಲ್ಲಿ ಬಂದ ಮಳೆ ನಂತರ ಬಂದಿರಲಿಲ್ಲ. ಕಳೆದ ಎರಡು ವಾರಗಳಿಂದ ರಾಜ್ಯದ ಬೇರೆ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಬೆಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣ ಮಾತ್ರ ಇತ್ತು.
ಇದೀಗ ಒಂದು ವಾರದ ಬಿಡುವಿನ ನಂತರ ಮತ್ತೆ ಮುಂಗಾರು ಚುರುಕಾಗುವ ಸೂಚನೆ ದೊರೆತಿದೆ. ಇದರ ಪರಿಣಾಮ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಇಂದು ಮಧ್ಯಾಹ್ನದ ಬಳಿಕ ಮಳೆ ಶುರುವಾಗಿದೆ.
ದಟ್ಟ ಮೋಡ, ಗಾಳಿ ಮತ್ತು ಮಳೆಯಾಗುತ್ತಿದೆ. ಹವಾಮಾನ ವರದಿ ಪ್ರಕಾರ ಈ ವಾರವಿಡೀ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ. ಅದರಲ್ಲೂ ನಾಳೆ ಮತ್ತು ನಾಡಿದ್ದು ವಿಪರೀತ ಮಳೆಯಾಗುವ ಸೂಚನೆಯಿದೆ. ಇನ್ನು ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಸದ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿಯಷ್ಟಿದೆ.