Select Your Language

Notifications

webdunia
webdunia
webdunia
webdunia

ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿಯನ್ನ ಹೆಡೆಮುರಿಕಟ್ಟಿದ ಬೆಂಗಳೂರು ಪೊಲೀಸರು..!

Bengaluru Police decapitated the accused who had made a fake bomb call
bangalore , ಸೋಮವಾರ, 10 ಜುಲೈ 2023 (20:33 IST)
ಮಸೀದಿ ಸಿಬ್ಬಂದಿಗಳ ಮೇಲಿನ ಕೋಪಕ್ಕೆ ಈ ಕುಚೇಷ್ಟೇ ಮಾಡಿದ್ದಾನೆ. ಈತನ ಕೃತ್ಯದಿಂದ ರಾತ್ರಿಯಲ್ಲಾ ತಡಕಾಡಿ ಪೊಲೀಸರು ಸುಸ್ತಾಗಿದ್ದಾರೆ. ಶಿವಾಜಿನಗರಕ್ಕೆ ಬಂದು ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿಗೆ ಬಂದಿದ್ದ, ಚಂದ ಕೇಳಿ ರಾತ್ರಿ ಉಳಿದು ಕೊಳ್ಳಲು ಮುಂದಾಗಿದ್ದ , ಆಗ ಯಾರಿಗೂ ಇಲ್ಲಿ ಉಳಿದು ಕೊಳ್ಳುವ ಅವಕಾಶ ಕೊಡುವ ಪದ್ಧತಿ ಇಲ್ಲ ಎಂದಿದ್ದ ಸಿಬ್ಬಂದಿ ಹೇಳಿದ್ರು.. ಬಳಿಕ ಮಸೀದಿಯಿಂದ ಆತನ ಕಳುಹಿಸಿದ್ದರು. ಇದೇ ಬೇಸರದಲ್ಲಿ ಮಸೀದಿ ಬಳಿಯಿಂದ ರಾತ್ರಿ 9.30ಕ್ಕೆ ಮೆಜೆಸ್ಟಿಕ್ ಬಂದಿದ್ದ, ಮೆಜೆಸ್ಟಿಕ್ ನಿಂದ ಕರ್ನೂಲ್ ಬಸ್ ಹತ್ತಿದ್ದ. ಬಳಿಕ ದೇವನಹಳ್ಳಿ ದಾಟುತಿದ್ದಂತೆ ಕಟ್ರೋಲ್ ನಂಬರ್ 100ಕ್ಕೆ ಕರೆ ಮಾಡಿದ್ದ. ಆಟೋ ಫಾರ್ವರ್ಡ್ ಮುಖಾಂತರ 112ಗೆ ಕನೆಕ್ಟ್ ಆಗಿತ್ತು ಕರೆ ಮಾಡಿ ಫೋನ್ ಸ್ಪಿಚ್ಡ್ ಆಫ್ ಮಾಡಿ ಆರಾಮಾಗಿ ಮಲಗಿಕೊಂಡಿದ್ದ.ಇದೀಗ‌ ಶಿವಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆ‌ ತಂದಿದ್ದಾರೆ. ಒಟ್ಟಿನಲ್ಲಿ ಸಿನಿಮಾಗಳಲ್ಲಿ ಮಾತ್ರ ಈ ರೀತಿಯಾಗಿ ನೋಡ್ತಾಯಿದ್ವಿ. ಆದ್ರೆ ಇದೀಗ ಬೆಂಗಳೂರಿ ನಲ್ಲಿಯು ಅದು ಒಂದು ರೀತಿಯಾಗಿ ಟ್ರೆಂಡ್ ಆಗಿದೆ. ನನಾಯ್ತು ನನ್ನ ಪಾಡಾಯ್ತು ಅಂತ ಬಂದು ಹೋಗಿದ್ರೆ ಈತನಿಗೆ ಇವತ್ತು ಜೈಲಿನಲ್ಲಿ ಮುದ್ದೆ ಮುರಿಯುವ ಕೆಲಸ ತಪ್ತಾಯಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯ ರಾತ್ರಿ ನಶೆಯಲ್ಲಿದ್ದ ಯುವತಿಯರ ರಂಪಾಟ..!