ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಈ ರಸ್ತೆ ಬದಿಗಳಲ್ಲಿ ಇನ್ನು ವಾಹನ ಪಾರ್ಕ್ ಮಾಡಿದ್ರೆ ಪಾರ್ಕಿಂಗ್ ಶುಲ್ಕ ಬೀಳೋದು ಗ್ಯಾರಂಟಿ. ಯಾವೆಲ್ಲಾ ರಸ್ತೆಗಳು ಇಲ್ಲಿದೆ ವಿವರ.
ರಸ್ತೆ ಬದಿ ವಾಹನ ಪಾರ್ಕ್ ಮಾಡುವುದಕ್ಕೂ ಇನ್ನು ಪಾರ್ಕಿಂಗ್ ಶುಲ್ಕ ವಿಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಅದರಂತೆ ಈಗ ಪ್ರಾಯೋಗಿಕವಾಗಿ ಕೆಲವು ರಸ್ತೆಗಳನ್ನು ಗುರುತು ಹಾಕಿಕೊಂಡಿದ್ದು ಆ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಖಾಸಗಿ ನಿರ್ವಾಹಕರನ್ನು ನೇಮಿಸಲು ಟೆಂಡರ್ ಕರೆದಿದೆ.
ಯಾವೆಲ್ಲಾ ರಸ್ತೆಗಳು?
ಪೇ ಆಂಡ್ ಪಾರ್ಕ್ ಯೋಜನೆಗೆ ಆಯ್ಕೆಗೊಂಡಿರುವ ರಸ್ತೆಗಳೆಂದರೆ ಕಮರ್ಷಿಯಲ್ ಸ್ಟ್ರೀಟ್, ಕೇಂಬ್ರಿಜ್ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಮಗ್ರತ್ ರೋಡ್, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಕ್ರೆಸೆಂಟ್ ರಸ್ತೆ ,ಬ್ರಿಗೇಡ್ ರಸ್ತೆ ಮತ್ತು ಸಂಪಿಗೆ ರಸ್ತೆ ಸೇರಿದಂತೆ ಒಟ್ಟು 23 ರಸ್ತೆಗಳು.
ಪಾರ್ಕಿಂಗ್ ಗೊಂದಲ ತಪ್ಪಿಸುವುದರ ಜೊತೆಗೆ ಈ ಮೂಲಕ ನಗರ ನಿಗಮಗಳ ಆದಾಯ ಹೆಚ್ಚಿಸುವುದು ಇದರ ಗರಿಯಾಗಿದೆ. ನಾಗರಿಕರು ವೆಬ್ ಅಥವಾ ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ಮೊದಲೇ ಪಾರ್ಕಿಂಗ್ ಗೆ ಜಾಗ ಬುಕ್ ಮಾಡುವ ವ್ಯವಸ್ಥೆ ಬರಲಿದೆ.