Select Your Language

Notifications

webdunia
webdunia
webdunia
webdunia

ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಬಣದಿಂದ ಮಹತ್ವದ ಹೇಳಿಕೆ

Siddaramaiah
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಬಣದಿಂದ ಮಹತ್ವದ ಹೇಳಿಕೆಯೊಂದು ಬಂದಿದೆ. ಈ ದಿನದವರೆಗೂ ಸಿಎಂ ಬದಲಾವಣೆಯಾಗಲ್ಲ ಎಂದಿದೆ.

ಸಂಕ್ರಾಂತಿ ವೇಳೆಗೆ ನಾಯಕತ್ವದ ಬದಲಾವಣೆ ಚರ್ಚೆ ಗರಿಗೆದರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲವೂ ಈಗ ಬೂದಿಮುಚ್ಚಿದ ಕೆಂಡದಂತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಬಣದ ನಾಯಕರು ಮಾರ್ಚ್ 31 ರವರೆಗೂ ಬದಲಾವಣೆ ಇಲ್ಲ ಎಂದಿದೆ.

ಮುಂದಿನ ಬಜೆಟ್ ನ್ನೂ ಸಿದ್ದರಾಮಯ್ಯನವರೇ ಮಂಡಿಸಲಿದ್ದಾರೆ. ಬಜೆಟ್ ವರೆಗೂ ಯಾವುದೇ ಬದಲಾವಣೆಯಿಲ್ಲ. ಅಂತಹ ಕಲ್ಪನೆಯೂ ಬೇಡ ಎಂದು ಸಿದ್ದರಾಮಯ್ಯ ಆಪ್ತ ಬಳಗದ ಶಾಸಕ ಕೆಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ.

ಇನ್ನು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಕೂಡಾ ಇದೇ ಮಾತನ್ನಾಡಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಯಿಲ್ಲ ಎಂದಿದ್ದಾರೆ. ಅತ್ತ ಹೈಕಮಾಂಡ್ ಕೂಡಾ ಪಂಚ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎನ್ನಲಾಗಿದೆ. ಹೀಗಾಗಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಎರಡು-ಮೂರು ತಿಂಗಳಿಗೆ ಬ್ರೇಕ್ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ಧರಿಸಿದ ಮಹಿಳೆ ಸದ್ಯದಲ್ಲೇ ಭಾರತಕ್ಕೆ ಪ್ರಧಾನಿಯಾಗ್ತಾರೆ: ಅಸಾದುದ್ದೀನ್ ಒವೈಸಿ