Publish Date: Fri, 09 Jan 2026 (09:50 IST)
Updated Date: Fri, 09 Jan 2026 (09:52 IST)
ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಅಕ್ರಮ ವಲಸಿಗರ ಮನೆ ತೆರವು ಮಾಡಿದ್ದಕ್ಕೆ ಅನ್ಯಾಯವಾಗಿದೆ ಎಂದು ಆಕಾಶ ಭೂಮಿ ಒಂದು ಮಾಡಿದ್ದ ಕೇರಳ ಸಿಎಂ ಈಗ ಕಾಸರಗೋಡಿನ ಕನ್ನಡಿಗರ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ಸಿದ್ದರಾಮಯ್ಯ ಠಕ್ಕರ್ ನೀಡಿದ್ದಾರೆ.
ಕೋಗಿಲು ಲೇಔಟ್ ನಲ್ಲಿ ಅಕ್ರಮ ವಲಸಿಗರ ವಸತಿಗಳನ್ನು ನೆಲಸಮ ಮಾಡಿದ್ದಕ್ಕೆ ಕರ್ನಾಟಕ ಶೋಷಣೆ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ರಂಪ ಮಾಡಿದ್ದ ಕೇರಳ ಸಿಎಂ ಈಗ ತಮ್ಮದೇ ರಾಜ್ಯದ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಮಾಡಿ ಮಲಯಾಳ ಭಾಷಾ ಮಸೂದೆ 2025 ಜಾರಿಗೆ ತರಲು ಹೊರಟಿದ್ದಾರೆ.
ಇದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ. ಇಂತಹದ್ದೊಂದು ನಿಯಮ ಜಾರಿಗೆ ಬಂದರೆ ಗಡಿನಾಡಿನಲ್ಲಿ ಕನ್ನಡ ಕಲಿಕೆಯೇ ಇಲ್ಲವಾಗುತ್ತದೆ. ಕನ್ನಡಿಗರೂ ಅನಿವಾರ್ಯಹೋಗಲಿದೆವಾಗಿ ಮಲಯಾಳಂ ಕಲಿಯಬೇಕಾಗುತ್ತದೆ. ಈಗಾಗಲೇ ಕಾಸರಗೋಡಿನಲ್ಲಿ ಕನ್ನಡ ಅಳಿವಿನಂಚಿನಲ್ಲಿದೆ. ಈ ನಿಯಮವೂ ಬಂದರೆ ಕನ್ನಡ ಸಂಪೂರ್ಣ ನಶಿಸಿ ಹೋಗಲಿದೆ. ಇದು ಭಾಷಾ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಸಿದ್ದರಾಮಯ್ಯ ಸುದೀರ್ಘವಾಗಿ ಟ್ವೀಟ್ ಮಾಡುವ ಮೂಲಕ ಕೇರಳ ಸಿಎಂಗೆ ಠಕ್ಕರ್ ಕೊಟ್ಟಿದ್ದಾರೆ.