ಮಡಿಕೇರಿ: ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿದ್ದರಾಮಯ್ಯ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ್ ಅವರು ಸಿದ್ದರಾಮಯ್ಯ ಅವರು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ದೇವರಾಜ ಅರಸು ಅವರ ಹತ್ತಿರ ಬರಲು ಕೂಡ ಆಗೋದಿಲ್ಲ ಎಂದು ಟೀಕಿಸಿದರು.
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ದೇವರಾಜು ಅರಸು ಅವರು ನಮ್ಮನ್ನು ಅಗಲಿ ನಾಲ್ಕು ದಶಕಗಳು ಕಳೆದು ಹೋಗಿವೆ. ಅವರಿಲ್ಲದೆ ನಾಲ್ಕು ದಶಕ ಕಳೆದರೂ ಇಂದಿಗೂ ಅವರನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತಾರೆ. ಅವರ ವ್ಯಕ್ತಿತ್ವ ಆ ರೀತಿ ಇದೆ. ಸುಮ್ಮನೆ ಇದ್ರೂ ವಯಸ್ಸು ಆಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಕುಳಿತು ಕಾಲ ತಳ್ಳುತ್ತಿದ್ದಾರೆ ಅಷ್ಟೆ. ಹೊಸ ದಾಖಲೆ ಬರೆದಿದ್ದಾರೆ ಎಂದು ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಅವರು ದೇವರಾಜ ಅರಸು ಆಗಲೂ ಸಾಧ್ಯವಿಲ್ಲ ಎಂದು ಟೀಕೆ ಮಾಡಿದರು.
ದೇವರಾಜ ಅರಸು ಅವರು ರಾಜ್ಯದ ಜನತೆಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಸಣ್ಣ ಸಣ್ಣ ಸಮುದಾಯದವರನ್ನು ಕರೆದುಕೊಂಡು ಬಂದು ಕೈ ಹಿಡಿದು ಬೆಳೆಸಿದ್ದಾರೆ.
ಅನ್ನಭಾಗ್ಯ ನಮ್ಮದು ಎಂದು ಹೇಳುತ್ತಿರುವ ಇವರು ಅದು ಕೇಂದ್ರ ಸರ್ಕಾರದ ಯೋಜನೆ. ಅನ್ನಭಾಗ್ಯ ನಿಮ್ಮದಲ್ಲ. ಈ ರಾಜ್ಯದ ಜನತೆಗೆ ಎಲ್ಲಾ ದಿವಾಳಿಯ ಭಾಗ್ಯವನ್ನು ನೀಡದ ಕೊಡುಗೆ ನಿಮ್ಮದಾಗಿದೆ.