Select Your Language

Notifications

webdunia
webdunia
webdunia
webdunia

ಬೆಂಗಳೂರಿಗರೇ ಗಮನಿಸಿ, ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ಕಟ್!

ಬೆಂಗಳೂರಿಗರೇ ಗಮನಿಸಿ, ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ಕಟ್!
ಬೆಂಗಳೂರು , ಬುಧವಾರ, 8 ಡಿಸೆಂಬರ್ 2021 (10:28 IST)
ರಾಜ್ಯದ ರಾಜಧಾನಿ, ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ಈ ಸಮಸ್ಯೆ ಡಿಸೆಂಬರ್ 13ರವರೆಗೆ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಸ್ಕಾಂ ಹೇಳಿದೆ. ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ವಿದ್ಯುತ್ ಕಡಿತ ಉಂಟಾಗುತ್ತದೆ.
 ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ನಡುವೆ ವಿದ್ಯುತ್ ಸ್ಥಗಿತಗೊಳ್ಳಲಿದೆ. ಈ ರೀತಿ ವಿದ್ಯುತ್ ಕಡಿತ ಸಾರ್ವಜನಿಕರು ಅಸಮಧಾನ ಹೊರ ಹಾಕಿದ್ದಾರೆ.  ಡಿಸೆಂಬರ್ 13ರವರೆಗೆ  ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಬೆಂಗಳೂರಿನ 4 ವಲಯಗಳಲ್ಲಿ ಯಾವ ಯಾವ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ವಿದ್ಯುತ್ ಸರಬರಾಜು ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಇಂದು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಿಟ್ಲ ನಗರ, ಸಿದ್ದಾಪುರ, ಸೋಮೇಶ್ವರನಗರ, ಆರ್ಬಿಐ ಲೇಔಟ್, ಜೆಪಿ ನಗರ, ಅಯೋದ್ಯನಗರ, ವಿನಾಯಕ ನಗರ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯರಸ್ತೆ, ಕತ್ರಿಗುಪ್ಪೆ ಪೂರ್ವ,
ಬನಶಂಕರಿ 3ನೇ ಹಂತ, ಹೊಸಕೇರಹಳ್ಳಿ, ಹೊಸಕೆರೆಹಳ್ಳಿ, ಸಿದ್ದಾಪುರ, ಮಡಿವಾಳ, ಬಿಟಿಎಂ, ಮಾರತಳ್ಳಿ, ಸಂಜಯ ನಗರ, ಮಂಜುನಾಥ ನಗರ, ಐಟಿಪಿಎಲ್ ಮುಖ್ಯರಸ್ತೆ, ಎಇಸಿಎಸ್ ಲೇಔಟ್, ಸಿಕೆ ನಗರ, ನಾರಾಯಣ ನಗರ, ದೊಡ್ಡಕಲಸಂದ್ರ, ಗೊಟ್ಟಿಗೆರೆ, ಐಡಿಬಿಐ ಲೇಔಟ್, , ಪವಮಾನ ನಗರ, ಬಿಡಿಎ ಲೇಔಟ್, ನವೋದಯ ನಗರ, ಕೆಸಿಎ ಲೇಔಟ್, ಎಚ್ಆರ್ಆರ್. ಮತ್ತು ಬಿಳೇಕಹಳ್ಳಿ.
ಗುಡ್ಡದಹಳ್ಳಿ, ಬಸವಣ್ಣ ದೇವಸ್ಥಾನ, ಹೆಗಡೆ ನಗರ, ಅಮೃತಹಳ್ಳಿ, ಜಕ್ಕೂರು, ವಿನಾಯಕ ಲೇಔಟ್, ಕೆಎಚ್ಬಿಯ ಕ್ವಾರ್ಟರ್ಸ್, ಕೆಎಚ್ಬಿ ಕ್ವಾರ್ಟರ್ಸ್, ಉ. ಗಾರ್ಡನ್, ಸಿದ್ಧಾರ್ಥ ನಗರ ಮತ್ತು ಸುತ್ತಮುತ್ತಲಿನ ಪ್ರದೇಶ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ, ರವೀಂದ್ರ ನಗರ ಮತ್ತು ಸಂತೋಷ ನಗರ.

 


Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಪತ್ನಿಯನ್ನು ನೋಡಿ ಮದುವೆ ಮನೆಯಿಂದ ಓಟಕಿತ್ತ ವರ!