Select Your Language

Notifications

webdunia
webdunia
webdunia
webdunia

ಜಮೀರ್ ಸ್ಥಾನ ಕಸಿಯಲು ನನಗೇನು ತೆವಲಾ: ಬೇಳೂರು ಗೋಪಾಲಕೃಷ್ಣ

Beluru Gopalakrishna

Krishnaveni K

ಬೆಂಗಳೂರು , ಗುರುವಾರ, 26 ಜೂನ್ 2025 (15:25 IST)
Photo Credit: Instagram
ಬೆಂಗಳೂರು: ಜಮೀರ್ ಅಹ್ಮದ್ ರಿಂದ ರಾಜೀನಾಮೆ ಕೊಡಿಸಿ ಅವರ ಸ್ಥಾನಕ್ಕೆ ಹೋಗಲು ನನಗೇನು ತೆವಲಾ.. ಹೀಗಂತ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.
 
ವಸತಿ ಯೋಜನೆಯಲ್ಲಿ ಅವ್ಯವಹಾರ ಆರೋಪ ಬಂದಾಗ ಪ್ರತಿಕ್ರಿಯಿಸಿದ್ದ ಬೇಳೂರು ಗೋಪಾಲಕೃಷ್ಣ, ಜಮೀರ್ ಅಹ್ಮದ್ ರಾಜೀನಾಮೆ ಕೊಡುವುದು ಸೂಕ್ತ ಎಂದಿದ್ದರು. ಅವರ ಹೇಳಿಕೆಗೆ ನಾನಾ ಅರ್ಥ ಬಂದಿದೆ. ಜಮೀರ್ ಸ್ಥಾನದ ಮೇಲೆ ಬೇಳೂರು ಕಣ್ಣಿಟ್ಟಿದ್ದಾರೆ. ಇದೇಏ ಕಾರಣಕ್ಕೆ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎನ್ನಲಾಯಿತು. 

ಇದಕ್ಕೆ ಪ್ರತಿಕ್ರಿಯಿಸಿದ ಅವರು ‘ಜಮೀರ್ ಅಹ್ಮದ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಒಳ್ಳೆಯ ವ್ಯಕ್ತಿ. ಅವರ ರಾಜೀನಾಮೆ ಕೊಡಿಸಿ ನಾನು ಮಿನಿಸ್ಟರ್ ಆಗಲು ನನಗೇನು ತೆವಲಾ? ಹಾಗೇನಾದರೂ ಇದ್ದರೆ ನಾನು ನೇರವಾಗಿಯೇ ಕೇಳ್ತೀನಿ. ನಾನೂ ಮೂರು ಬಾರಿ ಎಂಎಲ್ಎ ಆಗಿದ್ದೀನಿ. ನನಗೆ ಮಂತ್ರಿಗಿರಿ ಬೇಕಾದಾಗ ನಾನೇ ಕೇಳ್ತೀನಿ’ ಎಂದಿದ್ದಾರೆ.

ಇನ್ನು ಕೆಎನ್ ರಾಜಣ್ಣ ರಾಜಕೀಯ ಕ್ರಾಂತಿಯಾಗಲಿದೆ ಎಂದಿರುವ ಬಗ್ಗೆ ಪ್ರಶ್ನಿಸಿದಾಗ ಯಾವ ಕ್ರಾಂತಿಯೋ ನನಗೆ ಗೊತ್ತಿಲ್ಲ. ಏನು ಕ್ರಾಂತಿಯಾಗಲು ಸಾಧ್ಯ ಎಂದು ಮರುಪ್ರಶ್ನಿಸಿದ್ದಾರೆ. ಭಿನ್ನಮತ ಬಿಜೆಪಿಯಲ್ಲೂ ಇಲ್ವಾ? ವಿಜಯೇಂದ್ರ-ಅಶೋಕ್ ಜೊತೆಗೇ ಇದ್ದರು. ಈಗ ಯಾಕೋ ಅಶೋಕ್, ಸೋಮಣ್ಣ ಪರ ಇರುವ ಹಾಗೆ ಕಾಣ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನು ಬೆಂಬಲಿಸುವವರು ಯಾರೂ ಇಲ್ಲ: ಸರ್ಕಾರದಲ್ಲಿನ ಬದಲಾವಣೆ ಬಗ್ಗೆ ಸತೀಶ ಜಾರಕಿಗೊಳಿ ಸುಳಿವು