Select Your Language

Notifications

webdunia
webdunia
webdunia
webdunia

ರಸ್ತೆಬದಿ ಕಿರಿಕ್ ತೆಗೆದು ಸುಲುಗೆ ಮಾಡೋರೇ ಎಚ್ಚರ.. ಎಚ್ಚರ..

ರಸ್ತೆಬದಿ ಕಿರಿಕ್ ತೆಗೆದು ಸುಲುಗೆ ಮಾಡೋರೇ ಎಚ್ಚರ.. ಎಚ್ಚರ..
bangalore , ಭಾನುವಾರ, 13 ಆಗಸ್ಟ್ 2023 (17:40 IST)
ಇತ್ತೀಚೆಗೆ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಏನ್ ಸ್ವಲ್ಪ ನಾ.. ನಾರ್ತ್, ಸೌತ್, ಈಸ್ಟ್ ವೆಸ್ಟ್ ಅಂತಾ ಎಂಟೂ ಡಿವಿಸನ್ ನಲ್ಲೂ ದಿನಕ್ಕೊಂದು ಸುಲುಗೆ ಕೇಸ್ ಆಗ್ತಾನೇ ಇವೆ.. ಅದ್ರಲ್ಲೂ ರಸ್ತೆ ಬದಿ ಗಾಡಿ ಟಚ್ ಆಯ್ತು ಅಂತಾ ಕಿರಿಕ್ ಮಾಡಿ ಕಾಸು ಕಿತ್ಕೊಳ್ಳೋರ ಸಂಖ್ಯೆ ಮಾತ್ರ ಹೆಚ್ಚಾಗ್ಬಿಟ್ಟಿದೆ.. ಸ್ವಲ್ಪ ಟ್ವಿಟ್ಟರ್ ಓಪನ್ ಮಾಡಿ ಬೆಂಗಳೂರು ಸಿಟಿ ಪೊಲೀಸ್ರ ಅಕೌಂಟ್ ನೋಡಿದ್ರೆ ಸಾಕು.. ಇದ್ರ ಬಗ್ಗೆ ದೂರುಗಳ ಮೇಲೆ ದೂರು.. ಟ್ಯಾಗ್ ಮಾಡಿ ದೂರು ನೀಡೋದ್ರ ಜೊತೆಗೆ ಪೊಲೀಸರಿಗೆ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿದ್ರು.. ಇದನ್ನೆಲ್ಲಾ ಗಮನಿಸಿರೋ ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ದಯಾನಂದ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.. ಸೋಷಿಯಲ್ ಮೀಡಿಯಾ ಮೂಲಕಾನೇ ಅಂತೋರಿಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ವಾಹನ ಅಡ್ಡಗಟ್ಟಿ ಗಲಾಟೆ ಮಾಡೋ ಕಿಡಿಗೇಡಿಗಳಿಗೆ ನಗರ ಪೊಲೀಸ್ ಆಯುಕ್ತರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.. ಇನ್ಮುಂದೆ ರಸ್ತೆಯಲ್ಲಿ ಕಾರು, ಬೈಕ್ ಅಡ್ಡಗಟ್ಟಿ ಗಲಾಟೆ ಮಾಡಿದ್ರೆ ಡೈರೆಕ್ಟಾಗಿ ರೌಡಿಶೀಟ್ ಓಪನ್ ಮಾಡೋಕೆ ಪೊಲೀಸ್ ಕಮೀಷನರ್ ಬಿ. ದಯಾನಂದ ಆದೇಶ ನೀಡಿದ್ದಾರೆ..  ನಗರದಲ್ಲಿ ಪದೇ ಪದೇ ರೋಡ್ ರೇಜ್ ಪ್ರಕರಣ ದಾಖಲಾಗ್ತಿದ್ವು..ವಿನಾಕಾರಣ ಕಾರು, ಬೈಕ್ ಅಡ್ಡಗಟ್ಟಿ ಕಿಡಿಗೇಡಿಗಳ ದುರ್ವತನೆ ಮಾಡ್ತಿದ್ರು.. ಸುಮ್ ಸುಮ್ನೆ ಗಲಾಟೆ ಮಾಡುವ ಕಿಡಿಗೇಡಿಗಳು, ಪುಂಡರ ಮೇಲೆ ರೌಡಿಶೀಟ್ ತೆರೆಯಲು ಸೂಚನೆ ನೀಡಿದ್ದಾರೆ.. ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಮೀಷನರ್ ಸೂಚನೆ ನೀಡಿದ್ದು, ರಸ್ತೆ ಗಲಾಟೆ ಅಥವಾ ಸುಲಿಗೆ ಮಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳಿ.. ಇಂತಹ ನಿರ್ಲಜ್ಜ ಕೃತ್ಯಗಳಲ್ಲಿ ತೊಡಗುವವರ ಮೇಲೆ ರೌಡಿಶೀಟ್ ತೆರೆಯಿರಿ ಅಂತಾ ನೇರ ಸೂಚನೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಬರೋ ದೂರುಗಳನ್ನ ಇಷ್ಟು ಪೊಲೀಸರು ಗಮನಹರಿಸ್ತಿರೋದು ಒಳ್ಳೆ ವಿಚಾರ.. ಆದ್ರೆ ಪ್ರಕರಣ ಸೋಷಿಯಲ್ ಮೀಡಿಯಾಗೆ ಬಂದು ಮೀಡಿಯಾದಲ್ಲಿ ಸದ್ದು ಮಾಡಿದ್ಮೇಲೆನೇ ಪೊಲೀಸರು ಕ್ರನ ಕೈಗೊಳ್ತಾರೆ ಅನ್ನೋ ಕೆಲ ಆರೋಪಗಳು ಬೇಸರದ ಸಂಗತಿ.. ಪೊಲೀಸ್ ಠಾಣೆಗೆ ದೂರು ಕೊಟ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ ಅನ್ನೋ ಕಾರಣಕ್ಕೆ ಜನ ಸೋಷಿಯಲ್ ಮೀಡಿಯಾ ಮೊರೆ ಹೋಗ್ತಿದ್ದಾರೆ ಅನ್ಸುತ್ತೆ‌‌.. ಇದ್ರ ನಡುವೆ ಸದ್ಯ ಪೊಲೀಸ್ ಕಮಿಷನರ್ ತಗೊಂಡಿರೋ ನಿರ್ಧಾರ ಒಳ್ಳೆ ವಿಚಾರವೇ.. ಆದ್ರೆ ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕಟ್ಟಡಗಳ ಮೇಲೆ ತ್ರಿವರ್ಣ