Select Your Language

Notifications

webdunia
webdunia
webdunia
webdunia

ಚಾಮರಾಜನಗರದಲ್ಲಿ ರೈಸ್ ಪುಲ್ಲಿಂಗ್ ದಂಧೆ

Rice pulling racket
ಚಾಮರಾಜನಗರ , ಭಾನುವಾರ, 13 ಆಗಸ್ಟ್ 2023 (16:30 IST)
ರೈಸ್ ಪುಲ್ಲಿಂಗ್ ದಂಧೆ ಮತ್ತೆ ಸದ್ದು ಮಾಡಿದ್ದು, ಯುವಕನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಅಜರ್ ಮಹಮ್ಮದ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಚಾಮರಾಜನಗರ ನಿವಾಸಿಗಳಾದ ಜಬಿ, ಫೈರೋಜ್ ಹಾಗೂ ಕೌನೆನ್ ಎಂಬವರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಬಿ, ಫೈರೋಜ್, ಕೌನೆನ್ ಎಂಬುವವರು ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದರು. ಈ ವಿಚಾರ ಅಜರ್​​ಗೆ ಗೊತ್ತಾಗಿದ್ದರಿಂದ, ಅಜರ್​​ನನ್ನು ಕರೆಸಿಕೊಂಡು ಕೊಲೆ ಮಾಡಲು ಯತ್ನಿಸಿದ್ದಾರೆ. ಗ್ಯಾಂಗ್​​ನಿಂದ ತಪ್ಪಿಸಿಕೊಂಡ ಅಜರ್ ರಾತ್ರಿಯೆಲ್ಲಾ ತಲೆ ಮರೆಸಿಕೊಂಡು ಇಂದು ಮುಂಜಾನೆ ಮನೆಯವರಿಗೆ ಕರೆ ಮಾಡಿದ್ದಾನೆ. ಅಜರ್ ಇಂದು ಆಸ್ಪತ್ರೆಗೆ ದಾಖಲಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಗಾಯಾಳು ಬಳಿ ಹೇಳಿಕೆ ಪಡೆದಿದ್ದಾರೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

10 ಲಕ್ಷ ಧ್ವಜಾರೋಹಣಕ್ಕೆ ಸಿದ್ದವಾಗ್ತಿದೆ ಪಾಲಿಕೆ...!