Select Your Language

Notifications

webdunia
webdunia
webdunia
webdunia

ಪತ್ನಿ ಸಾವು, ಪತಿಯೇ ಕೊಲೆಗೈದಿರೋ ಶಂಕೆ

ಪತ್ನಿ ಸಾವು, ಪತಿಯೇ ಕೊಲೆಗೈದಿರೋ ಶಂಕೆ
ಮಂಡ್ಯ , ಶನಿವಾರ, 12 ಆಗಸ್ಟ್ 2023 (14:51 IST)
ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ಮೈಸೂರಿನ ದರ್ಶಿನಿ ಮೃತ ದುರ್ದೈವಿಯಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಹೇಳಿದ್ದಾನೆ. ಕೆ.ಆರ್.ಆಸ್ಪತ್ರೆಗೆ ಪತ್ನಿ ತಂದು ಸೇರಿಸಿ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಗಂಡ ಸೂರ್ಯನೇ ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯ ಎಂಬುವರ ಜೊತೆ ವಿವಾಹವಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ದರ್ಶಿನಿ ಮತ್ತು ಸೂರ್ಯ ಇಬ್ಬರು ಪ್ರೀತಿಸಿ ಮದುವೆಯಾಗಿದ್ರು. ಸೂರ್ಯ ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ನನ್ನ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ. ವರದಕ್ಷಿಣೆ
ತರುವಂತೆ ಮಗಳನ್ನ ಹಿಂಸಿಸುತ್ತಿದ್ದ. ನನ್ನ ಮಗಳನ್ನ ಕೊಲೆ ಮಾಡಿ ನಮ್ಮ ಮೇಲು ಹಲ್ಲೆ ಮಾಡಿದ್ದಾನೆ.
 
ಬದುಕಿ ಬಾಳಬೇಕಿದ್ದ ನನ್ನ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು.
ಸೂರ್ಯ ಮತ್ತು ಆತನ ಕುಟುಂಬಸ್ಥರನ್ನ ಬಂಧಿಸಬೇಕು ಎಂದು ಮೃತ ಗೃಹಿಣಿ ತಾಯಿ ಆಗ್ರಹಿಸಿದ್ದಾರೆ. ದರ್ಶಿನಿ ಕುಟುಂಬಸ್ಥರು ಘಟನೆ ಸಂಬಂಧ ಕೆ.ಆರ್.ಎಸ್ ಠಾಣೆಗೆ ಪತಿ ಹಾಗೂ ಮನೆಯವರ ವಿರುದ್ಧ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

1-10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ಭಾಗ್ಯ