Publish Date: Tue, 23 Jun 2020 (09:52 IST)
Updated Date: Tue, 23 Jun 2020 (09:54 IST)
ಬೆಂಗಳೂರು : ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇದ್ರೆ ಒಳ್ಳೆಯದು ಎಂದು ಬೆಂಗಳೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಎಷ್ಟು ದಿನ ಅಂತಾ ಸೀಲ್ ಡೌನ್ ಮಾಡಲಾಗುತ್ತೆ. 15 ದಿನ ನಿಯಂತ್ರಣ ಆಗುತ್ತೆ ಮತ್ತೆ ಹೀಗೆ ಆಗುತ್ತೆ. ದೇಶಕ್ಕೆ ಬರಬಾರದು ಅಂದುಕೊಂಡಿದ್ದೆವು ಬಂದುಬಿಟ್ಟಿದೆ. ರಾಜ್ಯ ಸೇರಿ ಗ್ರಾಮೀಣ ಪ್ರದೇಶಕ್ಕೂ ಕೊರೊನಾ ಬಂದಿದೆ. ಸೂಕ್ಷ್ಮ ಪ್ರದೇಶಗಳನ್ನು ಕಂಟೈನ್ ಮೆಂಟ್ ಆಗಿ ಮಾಡಲಾಗಿದೆ. ಇನ್ನು ಮುಂದೆ ನಾವೇ ಎಚ್ಚೆತ್ತುಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಸಿ.ಟಿ.ರವಿ ಹೇಳಿದ್ದಾರೆ.