Select Your Language

Notifications

webdunia
webdunia
webdunia
webdunia

ಪೋಸ್ಟರ್ ಪಾಲಿಟಿಕ್ಸ್ಗೆ ಬ್ರೇಕ್ ಹಾಕಿದ ಬಿಬಿಎಂಪಿ

ಪೋಸ್ಟರ್ ಪಾಲಿಟಿಕ್ಸ್ಗೆ ಬ್ರೇಕ್ ಹಾಕಿದ ಬಿಬಿಎಂಪಿ
bangalore , ಬುಧವಾರ, 15 ಮಾರ್ಚ್ 2023 (19:14 IST)
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪೋಸ್ಟರ್ ಪಾಲಿಟಿಕ್ಸ್ ಜೋರಾಗುತ್ತಿದೆ. ಈ ಹಿಂದೆ ಪ್ಲೇಕ್ಸ್,ಬ್ಯಾನರ್, ಗಳ ಬಗ್ಗೆ  ಬಿಬಿಎಂಪಿ ಎಚ್ಚರಿಕೆ ಕೊಟ್ಟು ಸುಮ್ಮನಾಗಿತ್ತು. ಅದ್ರೇ ಪಾಲಿಕೆಗೆ ಕ್ಯಾರೆ ಎನ್ನದ ರಾಜಕೀಯ ನಾಯಕರ ಪೋಸ್ಟರ್ ಹಾವಳಿ ಜೊರಾಗಿದೆ.ಅದ್ರೆ ಪಾಲಿಕೆ ಈಗ ಒಂದೆಜ್ಜೆ ಮುಂದೆ ಇಟ್ಟು ಖಡಕ್ ಹೆಚ್ಚರಿಕೆ ಕೊಟ್ಟ  ಪೋಸ್ಟರ್ ಅಂಟೀಸಿದವರ ಮೇಲೆ ಕೇಸ್ ದಾಖಲಿಸಿದೆ. ಫ್ಲೆಕ್ಸ್ ಬ್ಯಾನರ್ ಬ್ಯಾನ್ ಆಗಿರೋ ಹಿನ್ನೆಲೆ ಪರ್ಯಾಯವಾಗಿ ಮತ್ತೊಂದು ದಾರಿಯಾಗಿ ಪೋಸ್ಟರ್ ಅಂಟಿಸಲು ಶುರು ಮಾಡಿದ್ದರು. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನಾ ನೀನಾ ಅಂತ ನಗರದ ಅಂದವನ್ನ ಹಾಳು ಮಾಡುವ ಕೆಲಸವನ್ನ ರಾಜಕೀಯ ಪಕ್ಷಗಳು ಮಾಡುತ್ತಿದ್ದರು ಸಹ ಪಾಲಿಕೆ ಗಪ್ ಚುಪ್ ಎನ್ನದೆ,ಪೋಸ್ಟರ್ ಬ್ಯಾನ್ ನಿಯಮವನ್ನೇ ಗಾಳಿಗೆ ತೂರಿ ಸುಮ್ನೆ ಕುತ್ತಿತ್ತು.ನಂತರ ಬೆಂಗಳೂರು ೧ ನ್ಯೂಸ್ ಪೋಸ್ಟರ್ ವಿಚಾರದಲ್ಲಿ ಪಾಲಿಕೆ ಗಪ್ ಚುಪ್ ಆಗಿರೊದ್ಯಾಕೆ ಎಂದು ಪ್ರಶ್ನೆಸಿದ್ದಕ್ಕೆ ಪೊಲೀಸ್ ಕಮೀಷನರ್ ಜೊತೆ ಐ ವೋಲ್ಟೇಜ್ ಮೀಟಿಂಗ್ ನಡೆಸಿದೆ.ಕೇಸ್ ದಾಖಲಿಸಲು ಮುಂದಾಗಿದೆ.

ನಗರದ ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್ ಗಳು ರಾರಾಜಿಸುತ್ತಿವೆ.ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ,ಕಾಂಗ್ರೆಸ್ ಭರವಸೆಗಳ ಪೋಸ್ಟರ್ ಪಾಲಿಟಿಕ್ಸ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಅದರೂ ಬಿಬಿಎಂಪಿ ಕ್ಯಾರೆ ಎಂದಿರಲ್ಲಿಲ್ಲಾ ರಾಜ್ ನ್ಯೂಸ್ ಈ ಸುದ್ದಿಯನ್ನ ಒಂದರ ಮೇಲೊಂದು ಸುದ್ದಿ ಬಿತ್ತರಿಸಿತ್ತು ತದಾದನಂತರ ಪೊಲೀಸ್ ಕಮೀಷನರ್ ಜೊತೆ ಬಿಬಿಎಂಪಿ ಕಮೀಷನರ್ ಮತ್ತು ಪಾಲಿಕೆ ಕಂದಾಯ ವಿಭಾಗದ ದೀಪಕ್ ಸೇರಿದಂತೆ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ.ಅದರಂತೆ ಪೋಸ್ಟರ್ ಕೇಸ್ ನಲ್ಲಿ ಒಟ್ಟು ಈಗಾಗಲೇ 90 ಕೇಸ್ ಗಳು ದಾಖಾಲಾಗಿವೆ ಇದರ ಪೈಕಿ 52 ಕೇಸ್ ಗಳಿಗೆ ಎಫ್,ಐ,ಆರ್ ಬಿದ್ದಿದೆ ಎನ್ನುತ್ತಾರೆ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿ ದೀಪಕ್.

ರಾಜಕೀಯ ನಾಯಕರು ಪಕ್ಷಗಳ ಹೆಸರಿನಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ವಲಯಗಳಲ್ಲಿ ಪೊಸ್ಟ್ ರ್ ಅಂಟಿಸಿದ್ದ ಕೆಲ ಮಂದಿಗಳ ಮೇಲೆ ಬಿಬಿಎಂಪಿಯ ಖಡಕ್ ಎಚ್ಚರಿಕೆಯ ಮೇರಿಗೆ ಕೆಲವು ಠಾಣೆ ಗಳಲ್ಲಿ ಎಫ್.ಐ.ಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಇನ್ನದರೂ ಎಚ್ಚತ್ತು ಪ್ಲೇಕ್ಸ್,ಬ್ಯಾನರ್, ಪೋಸ್ಟರ್ ಕಂಪ್ಲೀಟ್ ಬ್ಯಾನ್ ಆಗುತ್ತಾ ಅಥವಾ ಪಾಲಿಕೆಯ ಇಂತಹ ಆದೇಶಗಳನ್ನು,ನಿಯಮಗಳನ್ನು ಗಾಳಿಗೆ ತೂರ್ತರಾ ಅಂತಾ ಮುಂದಿನ ದಿನಗಳಲ್ಲಿ ಕಾದು  ನೋಡ್ಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ - 21 ರಿಂದ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರದ ಅಸ್ತ್ರ..!