Publish Date: Wed, 19 Oct 2022 (08:02 IST)
Updated Date: Wed, 19 Oct 2022 (10:03 IST)
ಬೆಂಗಳೂರು : ಕೊನೆಗೂ ಬಿಬಿಎಂಪಿ ಕುಂಭಕರ್ಣ ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ. ನಗರದ ರಸ್ತೆ ಗುಂಡಿಗಳಿಗೆ ಬಿದ್ದು ಅನಾಹುತಗಳು ಸಾವು-ನೋವು ವರದಿಯಾಗುತ್ತಿದ್ದಂತೆ ಜನರು ಪಾಲಿಕೆಗೆ ಹಿಡಿಶಾಪ ಹಾಕುತ್ತಿರುವುದರಿಂದ ಎಚ್ಚೆತ್ತಂತೆ ಕಾಣುತ್ತಿದೆ.
ಬೆಂಗಳೂರು ಸಂಚಾರ ಪೊಲೀಸರ ಬಳಿ ನಗರದ ರಸ್ತೆಗಳಲ್ಲಿರೋ ಗುಂಡಿಗಳ ಮಾಹಿತಿ ಕೇಳಿದೆ. 8 ವಲಯದ ಪ್ರಮುಖ ರಸ್ತೆಗಳಲ್ಲಿರೋ ಗುಂಡಿಗಳ ಸಂಪೂರ್ಣ ಮಾಹಿತಿ ನೀಡುವಂತೆ ಪಾಲಿಕೆ ಕೇಳಿದೆ.
ಪಾಲಿಕೆಯ ಮನವಿ ಮೇರೆಗೆ ಸಂಚಾರ ಪೊಲೀಸರು ನಿರಂತರ ಮಳೆಯಿಂದ ನಗರದಲ್ಲಿ ಹೊಸದಾಗಿ ರಸ್ತೆಯಲ್ಲಿ ಬಾಯಿ ತೆರೆದಿರೋ ಗುಂಡಿಗಳ ಸಂಪೂರ್ಣ ಮಾಹಿತಿ ಸಿದ್ದಪಡಿಸಿದ್ದು, ಒಂದು ವಾರದ ಒಳಗಾಗಿ ನಗರದ ರಸ್ತೆಗಳಲ್ಲಿರೋ ಗುಂಡಿಗಳ ಮಾಹಿತಿ ಕೊಡಲು ಸಂಚಾರಿ ಪೊಲೀಸರು ತಯಾರಿ ನಡೆಸಿದ್ದಾರೆ.