Select Your Language

Notifications

webdunia
webdunia
webdunia
webdunia

ನಿಮ್ಮಪ್ಪಂದು ಪೋಸ್ಕೋ ಕೇಸ್ ತೆಗಿತೀನಿ ಅಂದಿದ್ದಕ್ಕೆ ವಿಜಯೇಂದ್ರ ತಣ್ಣಗಾದ: ಬಸನಗೌಡ ಯತ್ನಾಳ್

Basanagowda Patil Yatnal

Krishnaveni K

ಕಲಬುರಗಿ , ಮಂಗಳವಾರ, 4 ಫೆಬ್ರವರಿ 2025 (16:12 IST)
ಕಲಬುರಗಿ: ನಿಮ್ಮಂದು ಪೋಸ್ಕೋ ಕೇಸ್ ತೆಗೀತೀನಿ ಎಂದಿದ್ದಕ್ಕೆ ಬಿವೈ ವಿಜಯೇಂದ್ರ ಥಂಡಾ ಹೊಡೆದ ಎಂದು ಬಂಡಾಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ಬಿವೈ ವಿಜಯೇಂದ್ರರನ್ನು ಶತಾಯ ಗತಾಯ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಲೇ ಬೇಕು ಎಂದು ಪ್ರಯತ್ನಿಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಈ  ವೇಳೆ ಬಿವೈ ವಿಜಯೇಂದ್ರ ಹೊಂದಾಣಿಕೆ ರಾಜಕಾರಣದ ವಿರುದ್ಧ ಮತ್ತೊಮ್ಮೆ ಕಿಡಿ ಕಾರಿದ್ದಾರೆ. ಶಿವಮೊಗ್ಗದಲ್ಲಿ ಬಾಣಂತಿಯರ ಸಾವಾಯ್ತಲ್ಲ ಅಲ್ಲಿಗೆ ವಿಜಯೇಂದ್ರ ಬಂದಿದ್ದಾನಾ? ಬಂದ್ರೆ ನಿಮ್ಮಪ್ಪಂದು ಕೇಸ್ ತೆಗಿತೀನಿ ಎಂದು ಖರ್ಗೆ ವಾರ್ನ್ ಮಾಡಿದ್ದ. ಅದಕ್ಕೇ ಇಂವಾ ಥಂಡಾ ಹೊಡೆದ ಎಂದು ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಎಲ್ಲೇ ಏನೇ ಪ್ರತಿಭಟನೆ ಮಾಡುವುದಿದ್ದರೂ ವಿಜಯೇಂದ್ರ ನೇರವಾಗಿ ಹೋಗಲ್ಲ. ಕಾರ್ಯಕರ್ತರನ್ನು ಕಳುಹಿಸುತ್ತಾನೆ. ಯಾಕೆಂದರೆ ನೇರವಾಗಿ ಹೋಗದಂತೆ ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಟಲ್ ಕುಂಭಮೇಳ ಎಂದಿದ್ದ ಸರ್ಕಾರದಿಂದ ಸತ್ತವರ ಸಂಖ್ಯೆ ಮಾತ್ರ ಮರೆ: ಅಖಿಲೇಶ್ ಯಾದವ್‌