Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ನಿಯಂತ್ರಣವೂ ಇಲ್ಲ, ಕಾನೂನು ಕಾಪಾಡುವ ಆಸಕ್ತಿಯೂ ಇಲ್ಲ: ಆರ್‌ ಅಶೋಕ್‌

R Ashok

Sampriya

ಬೆಂಗಳೂರು , ಭಾನುವಾರ, 18 ಆಗಸ್ಟ್ 2024 (17:29 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಸಮಾಜ ಘಾತುಕ ಶಕ್ತಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದ್ದು, ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡಲಾಗದ ಪರಿಸ್ಥಿತಿ ಎದುರಾಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಇಡೀ ರಾಜ್ಯವನ್ನ ಬೆಚ್ಚಿ ಬೀಳಿಸಿದೆ. ಈ ಸಂಬಂಧ ಎಕ್ಸ್‌ನಲ್ಲಿ ಫೋಸ್ಟ್ ಹಂಚಿಕೊಂಡಿರುವ ಅವರು, ಸಿದ್ದರಾಮಯ್ಯ ಆಡಳಿತದಲ್ಲಿ ಮಹಿಳೆಯರಿಗೆ ಶಾಂತಿ, ಸುರಕ್ಷತೆಯ ಗ್ಯಾರಂಟಿ ಯಾವಾಗ ಸಿಗಲಿದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಸಮಾಜ ಘಾತುಕ ಶಕ್ತಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದ್ದು, ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡಲಾಗದ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಇಡೀ ರಾಜ್ಯವನ್ನ ಬೆಚ್ಚಿ ಬೀಳಿಸಿದೆ.

ಮಹಿಳೆಯರ ಮೇಲಿನ ಹಲ್ಲೆ, ಅತ್ಯಾಚಾರದ ಘಟನೆಗಳು ಪದೇ ಪದೇ ಮರುಕಳಿಸುತ್ತಲೇ ಇರುವುದರಿಂದ ರಾಜ್ಯದ ಘನತೆ, ವರ್ಚಸ್ಸಿಗೆ ಕುತ್ತು ಬಂದಿದೆ. ಬೆಂಗಳೂರಿನಂತಹ ವಿಶ್ವನಗರಿಯ ಹೆಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟು ಹೆಸರು ಬರುತ್ತಿದೆ.

ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬಣ ಬಡಿದಾಟ, ಆಂತರಿಕ ಕಲಹ, ರಾಜಕೀಯ ಮೇಲಾಟದಲ್ಲೇ ನಿರತವಾಗಿರುವ ಕಾಂಗ್ರೆಸ್
 ಸರ್ಕಾರಕ್ಕೆ ಆಡಳಿತದ ಮೇಲೆ ನಿಯಂತ್ರಣವೂ ಇಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವ ಆಸಕ್ತಿಯೂ ಇಲ್ಲ.

ಮಹಿಳೆಯರಿಗೆ ಶಾಂತಿ, ಸುರಕ್ಷತೆಯ ಗ್ಯಾರೆಂಟಿ ಯಾವಾಗ ಸಿಗಲಿದೆ ಸಿಎಂ ಸಿದ್ದರಾಮಯ್ಯನವರೇ?

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಶಾಲೆಯಲ್ಲಿ ಕೊಟ್ಟ ಬಿಸ್ಕೆಟ್ ಸೇವಿಸಿ 80ವಿಸ್ಯಾರ್ಥಿಗಳು ಅಸ್ವಸ್ಥ