Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ಡೀಲ್ ಕುದುರದಿದ್ದರೆ, ನೋ ಡ್ಯೂಟಿ, ಸಂಬಳ ಮಾತ್ರ ಗ್ಯಾರೆಂಟಿ

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ಡೀಲ್ ಕುದುರದಿದ್ದರೆ, ನೋ ಡ್ಯೂಟಿ, ಸಂಬಳ ಮಾತ್ರ ಗ್ಯಾರೆಂಟಿ

Sampriya

ಬೆಂಗಳೂರು , ಗುರುವಾರ, 8 ಆಗಸ್ಟ್ 2024 (17:40 IST)
ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಗ್ಗಿಲ್ಲದೆ ನಡೆಯುತ್ತಿರುವ ವರ್ಗಾವಣೆ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಅವರು ಹೇಳಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರ್‌ ಅಶೋಕ್ ಅವರು, ವರ್ಗಾವಣೆ ಡೀಲ್ ಕುದುರದಿದ್ದರೆ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೆ ಬಿಟ್ಟಿ ಸಂಬಳ ಕೊಟ್ಟು ಕೂರಿಸುವ ಪರಿಪಾಠ ಆರಂಭವಾಗಿದ್ದು, ನಗರಾಭಿವೃದ್ದಿ ಇಲಾಖೆಯ 25 ಅಧಿಕಾರಿಗಳಿಗೆ ಕಳೆದ 15 ತಿಂಗಳಿನಿಂದ ಯಾವುದೇ ಸ್ಥಳ ನಿಯುಕ್ತಿ ಮಾಡದೆ ರಾಜ್ಯದ ಬೊಕ್ಕಸಕ್ಕೆ 2.40 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ.

ಸಿಎಂ ಸಿದ್ದರಾಮಯ್ಯನವರೇ, ಮೂಡಾ ಹಗರಣದ ಕಡತಗಳನ್ನ ಮೈಸೂರಿನಿಂದ ಬೆಂಗಳೂರಿಗೆ ತಂದು ಅವುಗಳನ್ನ ತಿದ್ದಿ, ತೀಡಿ, ತಿರುಚಿ ಸಾಕ್ಷಿ ನಾಶ ಮಾಡುವಲ್ಲಿ ಬ್ಯುಸಿ ಆಗಿರುವ ತಮ್ಮ ಆಪ್ತ ಸಚಿವ ಭೈರತಿ ಸುರೇಶ್ ಅವರಿಗೆ  ಅವರ ಇಲಾಖೆಯಲ್ಲಿ 25 ಅಧಿಕಾರಿಗಳಿಗೆ 15 ತಿಂಗಳಿನಿಂದ ಸ್ಥಳ ನಿಯುಕ್ತಿ ಆಗದಿರುವ ವಿಷಯವೇ ಗೊತ್ತಿಲ್ಲವಂತೆ. ಇನ್ನಾದರೂ ಅವರಿಗೆ ಮೂಡಾ ಹಗರಣದ ಕಡತ ತಿರುಚುವ ಕೆಲಸದಿಂದ ಮುಕ್ತಿ ನೀಡಿ ಇಲಾಖೆಯ ಕರ್ತವ್ಯದ ಬಗ್ಗೆ ಗಮನ ಹರಿಸಲು ಬಿಡಿ.

ಅಂದಹಾಗೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ವರ್ಗಾವಣೆ ದಂಧೆಯಲ್ಲಿ ತಮ್ಮ ಪಾಲೆಷ್ಟು ಸಿಎಂ ಸಿದ್ದರಾಮಯ್ಯನವರೇ ಎಂದು ಪ್ರಶ್ನೆಇಸಿದ್ದಾರೆ.
 ನವರೇ?

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್ ಬೋರ್ಡ್ ಮುಸ್ಲಿಮರ ವೈಯಕ್ತಿಕ ಕಾನೂನು, ಅದರಲ್ಲಿ ಕೇಂದ್ರ ಮಧ್ಯಪ್ರವೇಶಿಸಬಾರದು: ಸಿಎಂ ಸಿದ್ದರಾಮಯ್ಯ