Select Your Language

Notifications

webdunia
webdunia
webdunia
webdunia

ಮುಡಾ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಡಿನೋಟಿಫಿಕೇಷನ್ ಉರುಳು: ರಾಜೀನಾಮೆಗೆ ಹೆಚ್ಚಿದ ಒತ್ತಡ

ಮುಡಾ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಡಿನೋಟಿಫಿಕೇಷನ್ ಉರುಳು: ರಾಜೀನಾಮೆಗೆ ಹೆಚ್ಚಿದ ಒತ್ತಡ

Sampriya

ಬೆಂಗಳೂರು , ಮಂಗಳವಾರ, 6 ಆಗಸ್ಟ್ 2024 (17:09 IST)
ಬೆಂಗಳೂರು: ಮುಡಾ ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಂದು ಡಿನೋಟಿಫಿಕೇಷನ್ ದೂರು ದಾಖಲಾಗಿದೆ.

ಮುಡಾದಂತೆ ತಮ್ಮ ಪ್ರಭಾವ ಬಳಸಿ ಮೈಸೂರು ತಾಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನ ಡಿನೋಟಿಫೈ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ..

ಈ ಸಂಬಂಧ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿ, ಮೈಸೂರು ಚಲೋ ಪಾದಯಾತ್ರೆ ಚಾಮುಂಡಿ ತವರಿಗೆ ತಲುಪುವ ಮುನ್ನಾವೇ ಸಿದ್ದರಾಮಯ್ಯ ಅವರು ಅನಾಚಾರಗಳು ಒಂದೊಂದೆ ಹೊರಬರುತ್ತಿದೆ ಎಂದು ಲೇವಡಿ ಮಾಡಿದೆ.

ಪೋಸ್ಟ್‌ನಲ್ಲಿ ಏನಿದೆ: ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಂದು ಡಿನೋಟಿಫಿಕೇಷನ್ ದೂರು ದಾಖಲಾಗಿದೆ.

ಮುಡಾದಂತೆ ತಮ್ಮ ಪ್ರಭಾವ ಬಳಸಿ ಮೈಸೂರು ತಾಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನ ಡಿನೋಟಿಫೈ ಮಾಡಿದ್ದಾರೆ.

ಬಡವರಿಗೆ, ದೀನ ದಲಿತರಿಗೆ, ಹಿಂದುಳಿದವರಿಗೆ ಅಶ್ರಯ ಮನೆ ನೀಡಲು ಮೈಸೂರು  ಜಿಲ್ಲಾಡಳಿತ 1972ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು 30 ವರ್ಷಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಲು ಸೂಚಿಸಿದ 14 ತಿಂಗಳಲ್ಲಿಯೇ ಜಿಲ್ಲಾಧಿಕಾರಿಗಳು ಸಿದ್ದರಾಮಯ್ಯ ಅವರು ಸೂಚಿಸಿದ ಹೆಸರಿನವರಿಗೆ ಡಿನೋಟಿಫೈ ಆಗಿದೆ.

ಈ ಸಂಬಂಧ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್  ಅವರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದಾರೆ.

ಮೈಸೂರು ಚಲೋ ಪಾದಯಾತ್ರೆ ಚಾಮುಂಡಿ ತವರೂರಿಗೆ ಕಾಲಿಡುವ ಮುನ್ನವೇ ಸಿದ್ದರಾಮಯ್ಯನವರ ಒಂದೊಂದೇ ಅನಾಚಾರಗಳು ಹೊರ ಬರುತ್ತೀವೆ. ಮುಖ್ಯಮಂತ್ರಿಗಳೇ ರಾಜೀನಾಮೆ ಕೊಟ್ಟು ಮಾನ ಉಳಿಸಿಕೊಳ್ಳಿ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಟೀಕೆಗಳ ಬಳಿಕ ಎಚ್ಚೆತ್ತುಕೊಂಡ ಡಿಕೆ ಶಿವಕುಮಾರ್, ತಲೆಗೆ ಬಂತು ಹೆಲ್ಮೆಟ್