Publish Date: Tue, 07 Jan 2020 (19:13 IST)
Updated Date: Tue, 07 Jan 2020 (19:15 IST)
ರಾಜ್ಯದಲ್ಲಿಯೂ ಭಾರತ ಬಂದ್ ಬಿಸಿ ತಟ್ಟುವ ಸಾಧ್ಯತೆಗಳು ಅಧಿಕವಾಗಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳೋ ಲಕ್ಷಣಗಳು ಗೋಚರಿಸುತ್ತಿವೆ.
ಕೇಂದ್ರ ಸರಕಾರದ ಕಾರ್ಮಿಕ ನೀತಿಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿವೆ. ಸಾರ್ವತ್ರಿಕ ಮುಷ್ಕರ ಇದಾಗಿರೋದ್ರಿಂದ ರಾಜ್ಯದಲ್ಲಿಯೂ ಪ್ರತಿಭಟನೆ ಕಾವು ಜೋರಾಗಲಿದೆ ಎನ್ನಲಾಗಿದೆ.
ಕಾರ್ಮಿಕ ಸುಧಾರಣಾ ನೀತಿಯನ್ನು ಜಾರಿತರಲು ಕೇಂದ್ರ ಮುಂದಾಗುತ್ತಿದ್ದು, ಅದನ್ನು ಕೈಬಿಡಬೇಕು. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬಂದ್ ಗೆ ಕರೆ ನೀಡಲಾಗಿದೆ.
ಬಂದ್ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.