Publish Date: Fri, 08 Feb 2019 (13:51 IST)
Updated Date: Fri, 08 Feb 2019 (13:55 IST)
ಶಾಸಕರೊಬ್ಬರು ಸದನದಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಎಂಎಲ್ಎ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಜನಪ್ರತಿನಿಧಿಯ ಮನೆಗೆ ಭದ್ರತೆ ಬಿಗಿಗೊಳಿಸಲಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಶಾಸಕರ ಮನೆ ಸಮೀಪದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ.
ಶಾಸಕ ನಾರಾಯಣಗೌಡರ ನಿವಾಸದ ಬಳಿ ಪೊಲೀಸ್ ಡಿಆರ್ ತುಕಡಿ ನಿಯೋಜಿಸಲಾಗಿದೆ. ಶಾಸಕ ಸದನಕ್ಕೆ ತೆರಳದ ಹಿನ್ನಲೆ ಮನೆಗೆ ಪೊಲೀಸ್ ಕಣ್ಗಾವಲು ಬಿಗಿಗೊಳಿಸಲಾಗಿದೆ. ಜೆಡಿಎಸ್ ಕಾರ್ಯಕರ್ತರಿಂದ ಮನೆ ಮೇಲೆ ಕಲ್ಲೂ ತೂರಾಟದ ಭೀತಿಯಿಂದ ಪೊಲೀಸ್ ಕಣ್ಗಾವಲು ಇರಿಸಲಾಗಿದೆ.
ಶಾಸಕರ ನಿವಾಸದ ಸ್ವಲ್ಪ ದೂರದ ಬಳಿ ಪೊಲೀಸ್ ಡಿಆರ್ ವಾಹನ ನಿಲ್ಲಿಸಲಾಗಿದೆ. ಮನೆ ಬಳಿ ಪೊಲೀಸ್ ಭದ್ರತೆ ಹಾಕಿದರೇ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತದೆ ಎಂಬ ಕಾರಣಕ್ಕೆ ಶಾಸಕರ ಮನೆ ಸಮೀಪ ಪೊಲೀಸ್ ಕಣ್ಗಾವಲು ಹೆಚ್ಚಿಸಿ,
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.