Publish Date: Fri, 12 Jul 2019 (18:03 IST)
Updated Date: Fri, 12 Jul 2019 (18:06 IST)
ಮೈತ್ರಿ ಸರಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಮಹೇಶ ಕುಮಠಳ್ಳಿ ಮನೆಗೆ ಭದ್ರತೆ ಒದಗಿಸಲಾಗಿದೆ.
ಮೈತ್ರಿ ಸರ್ಕಾರ ಅತಂತ್ರಗೊಳಿಸಿದ ಕಾಂಗ್ರೆಸ್ ಪಕ್ಷದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಭದ್ರತೆ ಒದಗಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ ಮಹೇಶ್ ಕುಮಠಳ್ಳಿ ಮನೆಗೆ ಪೊಲೀಸರು ರಕ್ಷಣೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಮಹೇಶ್ ಕುಮಠಳ್ಳಿ ಮನೆಗೆ ಒಂದು ಕೆ ಎಸ್ ಆರ್ ಪಿ, ಒಂದು ಡಿ ಆರ್ ವ್ಯಾನ್ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮಹೇಶ್ ಕುಮಠಳ್ಳಿ ರಾಜಿನಾಮೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.