‘ಸಂವಿಧಾನ ಹೇಳಿದ್ದನ್ನೇ ಮಾಡುತ್ತೇನೆ ಎಂದ ಸ್ಪೀಕರ್’

ಶುಕ್ರವಾರ, 12 ಜುಲೈ 2019 (16:48 IST)
ಸಂವಿಧಾನ ಬದ್ಧವಾಗಿ ಹಾಗೂ ಸಂವಿಧಾನ ಪ್ರಕಾರವಾಗಿ ನಾನು ನೇಮಕಗೊಂಡಿರುವಂತಹ ಪ್ರತಿನಿಧಿಯಾಗಿದ್ದೇನೆ. ಹೀಗಾಗಿ ಸಂವಿಧಾನಕ್ಕೆ ಗೌರವ ಕೊಡುವುದರ ಜೊತೆಗೆ ಅದರ ಅಡಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತೇನೆ. ಹೀಗಂತ ಸ್ಪೀಕರ್ ಹೇಳಿದ್ದಾರೆ.

ವಿಧಾನ ಮಂಡಲ ಅಧಿವೇಶನಕ್ಕೂ ಮೊದಲು ಮಾತನಾಡಿದ ಅವರು, ಸಂವಿಧಾನದಿಂದ ವಿಮುಖನಾಗೋದಿಲ್ಲ. ಸಂವಿಧಾನದಲ್ಲಿ ಹೇಳಿದ್ದನ್ನು ಮಾತ್ರ ಮಾಡುತ್ತೇನೆ ಎಂದ್ರು.

ಕಾಂಗ್ರೆಸ್ – ಜೆಡಿಎಸ್ ನ ಅತೃಪ್ತ ಶಾಸಕರು ನನ್ನನ್ನು ಭೇಟಿ ಮಾಡಿ ಕ್ರಮಬದ್ಧವಾದ ರಾಜೀನಾಮೆ ಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಅವರಿಗೆ ಪ್ರತ್ಯೇಕವಾಗಿ ವಿಚಾರಣೆ ದಿನ ನಿಗದಿಗೊಳಿಸೋದಾಗಿ ಹೇಳಿದ್ರು.

ತೇಜೋವಧೆ ಮಾಡೋರಿಗೆ ಸಂತೋಷ ಆಗೋದಾದರೆ ಮಾಡಿಕೊಳ್ಳಲಿ. ಆ ಬಗ್ಗೆ ಒಂದಷ್ಟು ವಿಚಾರ ಮಾಡೋದಿಲ್ಲ ಅಂತ ಸ್ಪೀಕರ್ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಿಲ್ಲ’