ಜನನಿಬಿಡ ಪ್ರದೇಶವಾದ ಲಿಂಗಧೀರನಹಳ್ಳಿಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಘನತ್ಯಾಜ್ಯ ಘಟಕ ಆರಂಭವಾಗಿದೆ.ಇನ್ನು ಈ
ಘನತ್ಯಾಜ್ಯ ಘಟಕದಿಂದ ಜನರಂತೂ ಇಲ್ಲಿ ವಾಸಮಾಡಲಾಗದೆ ರೋಸಿಹೋಗಿದ್ದಾರೆ. ಅಷ್ಟೇ ಅಲ್ಲದೇ ಉಸಿರಾಡಲು ಆಗದಂತಹ ಪರಿಸ್ಥಿತಿಗೆ ಜನ ತಲುಪಿದ್ದಾರೆ. ಜೊತೆಗೆ ನೊಣಗಳ ಕಾಣದಿಂದ ಜನರು ಊಟ ತಿಂಡಿ ಮಾಡುವುದಕ್ಕೂ ಇಲ್ಲಿ ನರಕಯಾತನೆಯಾಗಿದೆ.
ಇನ್ನು ಸರ್ಕಾರಕ್ಕೆ ನೂರಾರು ಮೇಲ್ ಮತ್ತು ಪೋನ್ ಮೂಲಕ ಕಂಪ್ಲೇಟ್ ನೀಡಿದ್ರು ಪ್ರಯೋಜನವಾಗ್ತಿಲ್ಲ ಅಂತಾ ಜನರು ತಮ್ಮ ಅಳಲನ್ನ ತೋಡಿಕೊಂಡ್ರು.ಅಷ್ಟೇ ಅಲ್ಲದೇ ಬಿಬಿಎಂಪಿ ಘನತ್ಯಾಜ್ಯ ಘಟಕದ ಎದುರು ಧರಣಿ ನಡೆಸಿ ಆಕ್ರೋಶ ಹೊರಹಾಕಿದ್ರು.ಅಷ್ಟೇ ಅಲ್ಲದೆ ಕರ್ನಾಟಕ ಹೈಕೋರ್ಟ್ ಮತ್ತು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಈ ಘಟಕವನ್ನ ಮುಚ್ಚಬೇಕೆಂದು ಆದೇಶ ಕೊಟ್ಟಿದ್ರು ಬಿಬಿಎಂಪಿ ಸುಪ್ರೀಂ ಕೋರ್ಟ್ ಗೆ ಹೋಗಿ ತಪ್ಪು ಮಾಹಿತಿ ನೀಡಿದೆ. ಕೋರ್ಟ್ ದಾರಿ ತಪ್ಪಿಸಿ ಈ ಘಟಕವನ್ನ ಯಾರ ಹಿತಕ್ಕಾಗಿ ನಡೆಸುತ್ತಿದೀರಾ ಎಂಬುದು ಜನರ ಪ್ರಶ್ನೆಯಾಗಿದೆ.
ಕೋರ್ಟ್ ಆದೇಶ ಏನೇ ಇದ್ದರೂ ಜನರ ಸಾವು ಬದುಕಿನ ಪ್ರಶ್ನೆಯಾಗಿದೆ. ರಾತ್ರೋರಾತ್ರಿ ಘಟಕ ಸ್ಥಾಪಿಸಿದ್ದಾರೆಂದು ಜನರು ಆರೋಪ ಮಾಡ್ತಿದ್ದು, ಘಟಕ ಮುಚ್ಚಿಸಲೇಬೇಕೆಂದು ಆಕ್ರೋಶ ಹೊರಹಾಕ್ತಿದ್ದಾರೆ.ಇನ್ನು 20 ವರ್ಷಗಳ ನಂತರವೂ ನೀರು, ದೀಪ ,ರಸ್ತೆ ,ಒಳಚರಂಡಿಯಂತಹ ಯಾವುದೇ ಮೂಲಸೌಕರ್ಯ ನೀಡದೆ ,ಕಸವಿಲೇವಾರಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಿ ಜನರ ಜೀವದ ಜೊತೆ ಆಟವಾಡ್ತಿದ್ದಾರೆಂದು ಜನರು ಆಕ್ರೋಶ ಹೊರಹಾಕಿದ್ರು. ಆದ್ರೆ ಇಲ್ಲಿ ಇಷ್ಟೇಲ್ಲ ನಡೆಯುತ್ತಿದ್ರು ಯಾವುದೇ ಅಧಿಕಾರಿಗಳಾಗ್ಲಿ, ಜನಪ್ರತಿನಿಧಿಗಳಾಗ್ಲಿ ಇಲ್ಲಿಗೆ ಬರದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ