Publish Date: Fri, 12 Jan 2024 (19:06 IST)
Updated Date: Fri, 12 Jan 2024 (19:12 IST)
ಬೆಂಗಳೂರು-ಸಂಕ್ರಾಂತಿ ಹಬ್ಬದಂದು ಬಿಳಿಗಿರಿ ರಂಗನ ಬೆಟ್ಟಕ್ಕೆ ಬೈಕ್‌ಗಳಿಗೆ ನಿಷೇಧ ಹೇರಲಾಗಿದೆ. ಜನವರಿ 15 ಹಾಗೂ 16ರಂದು ಬೈಕ್‌ಗಳಿಗೆ ನಿಷೇಧ ಹೇರಿ ಚಾಮರಾಜನಗರ ಡಿಸಿ ಶಿಲ್ಪಾ ನಾಗ್ ಆದೇಶಿಸಿದ್ದಾರೆ.. ಸಂಕ್ರಾಂತಿ ಹಾಗೂ ಚಿಕ್ಕಜಾತ್ರೆ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದೆ.. ಹೀಗಾಗಿ ಬಿ.ಆರ್. ಹಿಲ್ಸ್‌ಗೆ ದ್ವೀಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ.. ರಾಜ್ಯ ಹಾಗೂ ಹೊರ ರಾಜ್ಯದಿಂದ ಬಿ.ಆರ್.ಹಿಲ್ಸ್‌ಗೆ ಪ್ರವಾಸಿಗರು ಆಗಮಿಸಲಿದ್ದಾರೆ.. ಬೆಟ್ಟದ ರಸ್ತೆ ಕಿರಿದಾಗಿರೋದ್ರಿಂದ ಬೈಕ್‌ಗಳಿಗೆ ನಿಷೇಧ ಹೇರಿದೆ. ಗುಂಬಳ್ಳಿ ಮತ್ತು ಹೊಂಡರಬಾಳು 2 ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ಗಳಲ್ಲಿಯೂ ನಿರ್ಬಂಧ ವಿಧಿಸಲಾಗಿದೆ.