Publish Date: Fri, 12 Jan 2024 (18:23 IST)
Updated Date: Fri, 12 Jan 2024 (18:28 IST)
ಬೆಂಗಳೂರು-ನಮ್ಮ ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆ.. ನಮ್ಮ ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರೈಲಿನಲ್ಲಿ ಎರಡು ಕೋಚ್ಗಳನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಿದೆ.
ಸದ್ಯ ನಮ್ಮ ಮೆಟ್ರೋ ರೈಲಿನಲ್ಲಿ ಒಂದು ಮಹಿಳಾ ಮೀಸಲು ಕೋಚ್ ಇದೆ. ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಎಚ್ಚೆತ್ತ ಮೆಟ್ರೋ ಅಧಿಕಾರಿಗಳು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಮಹಿಳೆಯರಿಗೆ 2 ಬೋಗಿ ಮೀಸಲಿಡಲು ಚಿಂತನೆ ನಡೆಸಿದ್ದಾರೆ.