ನಿಖಿಲ್ ಕುಮಾರಸ್ವಾಮಿ ಟಾಂಗ್ ಗೆ ತಿರುಗೇಟು

Webdunia
ಶನಿವಾರ, 5 ಮೇ 2018 (13:40 IST)
ರಾಮನಗರ: ನಾನು ಚುನಾವಣೆ ಮುಗಿಯೋವರೆಗೂ ಆ ವಿಚಾರ ಮಾತನಾಡಲ್ಲ. ಚುನಾವಣೆ ಮುಗಿಲಿ ಅಮೇಲೆ ಸಿಡಿ ವಿಚಾರ ಮಾತನಾಡ್ತೀನಿ. ಉತ್ತರ ಕೊಡ್ತೀನಿ, ಅವರು ಫಿಲಿಂ ಆಕ್ಟರ್, ಏನೋ ಬಂದು ಫಿಲಿಂ ಆಕ್ಟಿಂಗ್ ತರಹ ಮಾತಾಡಿ ಹೋಗಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದು ಮಾಗಡಿ ಕ್ಷೇತ್ರದ ಅಭ್ಯರ್ಥಿ ಎಚ್.ಸಿ ಬಾಲಕ್ರಷ್ಣ, ಯುವನಾಯಕ ನಿಖಿಲ್ ಕುಮಾರಸ್ವಾಮಿ ನೀಡಿದ ಟಾಂಗ್ ಗೆ ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಒಂದಲ್ಲ, ಒಂದ್ರೀತಿಲಿ ಒಂದೊಂದು ಹೊಸತರ ತಿರುವುಗಳನ್ನ ಪಡಿತಿದೆ. ಅದೇ ರೀತಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್,  ಜೆಡಿಎಸ್ ನಡುವೆ ಜಿದ್ದಾಜಿದ್ದಿನೆ ಸೃಷ್ಟಿಯಾಗ್ತಿದೆ. 
 
ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ಪ್ರಚಾರದ ವೇಳೆ, ಜೆಡಿಎಸ್ ನ ನಿಖಿಲ್ ನಮ್ಮ ಬಗ್ಗೆ ಮಾತನಾಡಿದ್ರೆ ಅವರ ಕ್ಯಾಸೆಟ್ಟುಗಳನ್ನ ಬಿಡುಗಡೆ ಮಾಡ್ತೀವಿ ಅಂತ ಬಹಿರಂಗ ಸಭೆಯಲ್ಲಿ ಹೇಳಿದ್ದ ಹೇಳಿಕೆಗೆ ನಿಖಿಲ್ ಬಿಡದಿ ಬಳಿಯ ಮಾಯಗಾನಹಳ್ಳಿಯಲ್ಲಿ ತಾಕತ್ತಿದ್ದರೆ ಬಿಡುಗಡೆ ಮಾಡಲಿ ಅಂತ ಬಹಿರಂಗ ಸವಾಲು ಹಾಕಿದ್ರು. 
 
ಸವಾಲಿಗೆ ಸವಾಲು ಅಂತ ಎಚ್.ಸಿ ಬಾಲಕೃಷ್ಣ ನಾನು ಆ ರೀತಿ ಹೇಳಿಲ್ಲ ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ರು. ಅದಕ್ಕೆ ಟಾಂಗ್ ನೀಡಿದ ನಿಖಿಲ್ ಹಾಗಾದ್ರೆ ಅವರು ಹೇಳಿರೊ ಸಿಡಿ ನನ್ನ ಸಿನೆಮಾ ಜಾಗ್ವಾರ್ ದಿರಬೇಕು ಎಂದು ವ್ಯಂಗ್ಯವಾಡಿದ್ರು.
 
ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ನನ್ನ ಕ್ರಮ ಸಂಖ್ಯೆಯನ್ನ ತಮ್ಮ ಕರ ಪತ್ರಗಳಲ್ಲಿ ತಪ್ಪಾಗಿ ನಮೂದಿಸಿ, ಮತದಾರರನ್ನ ದಾರಿ ತಪ್ಪಿಸುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂಬ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ, ಆ ರೀತಿಯಾಗಿ ತಪ್ಪಾಗಿದ್ದರೆ ತಿದ್ದು ಕೊಳ್ಳುತ್ತೇವೆ. ಅವರು ಕೇಸು ದಾಖಲಿಸುವುದಾದರೆ ದಾಖಲಿಸಲಿ ನಮ್ಮದೇನು ಅಭ್ಯಂತರ ಇಲ್ಲ 
 
 ಹೆಚ್.ಎಂ.ರೇವಣ್ಣ ಹಾಗೂ ಸಿ.ಎಂ.ಲಿಂಗಪ್ಪ ನಮಗೆ ಕೈಜೋಡಿಸಿರುವುದು ಆನೆ ಬಲಬಂದಂತಾಗಿದೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರು ಇಲ್ಲ . ಚುನಾವಣಾ ಪ್ರಚಾರ ಅದ್ದೂರಿಯಾಗಿ ನಡೆಯುತ್ತಿದೆ, ನನಗೆ ಎಲ್ಲರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಭಾಗದ ಚುನಾವಣಾ ಪ್ರಚಾರದ ವೇಳೆ ಬಾಲಕೃಷ್ಣ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments