Publish Date: Fri, 10 Jul 2026 (17:17 IST)
Updated Date: Fri, 10 Jul 2026 (17:27 IST)
ಬೆಂಗಳೂರು: ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಸ್ವಯಂ ಸೇವಾ ಸಂಘ, ಹಿಂದೂ ಸಂಘಟನೆಗಳು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಶದ ನಾಗರಿಕರಿಂದ ಹಾಗೂ
ಶ್ರೀ ರಾಮನ ಭಕ್ತರಿಂದ ಹಣವನ್ನು ಪಡೆದು ಈಗ ಶ್ರೀ ರಾಮನ ಸನ್ನಿಧಾನದಲ್ಲಿ ಹಣ, ಚಿನ್ನಾಭರಣವನ್ನು ದೋಚಿದ್ದಾರೆಂದು ಕರ್ನಾಟಕ ಕಾಂಗ್ರೆಸ್ ವಿಶೇಷವಾಗಿ ಇಂದು ಪ್ರತಿಭಟನೆ ನಡೆಸಿತು.
ಧಾರ್ಮಿಕ ಹಾಗೂ ದೇವರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದಂತಹ ಭ್ರಷ್ಟ ಬಿಜೆಪಿ ನಾಯಕರು ಇಂದು ಶ್ರೀರಾಮನ ಮೂರ್ತಿಯ ಮುಂಭಾಗದ ಹಣದ ಹುಂಡಿಯನ್ನೇ ಕದ್ದಿದ್ದಾರೆ ಎಂದು ಆರೋಪಿಸಿದರು.
ಧಾರ್ಮಿಕ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು
ಶ್ರೀರಾಮನ ವೇಷ ಧರಿಸಿದ ವ್ಯಕ್ತಿ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ನಾಯಕರು ಈ ಪ್ರತಿಭಟನರಯಲ್ಲಿ ಪಾಲ್ಗೊಂಡರು.
ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಇಂದು ದೇಶದ ಧಾರ್ಮಿಕ ಕ್ಷೇತ್ರವನ್ನೇ ಅಪವಿತ್ರ ಗೊಳಿಸಿದ್ದಾರೆ.
ಹಿಂದುತ್ವಕ್ಕೆ ನಾವೇ ವಾರಸುದಾರರೆಂದು ಹೇಳುತ್ತಿದ್ದ ಬಿಜೆಪಿ ಹಾಗೂ ಆರ್ ಎಸ್ ಎಸ್, ಸಂಘ ಪರಿವಾರದವರು ಇಂದು ಅಯೋಧ್ಯೆಯಲ್ಲಿ ಆಗಿರುವ ಲೂಟಿಯ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪ ಮಾಡಿದರು.
ದೇಶದ ಪ್ರಧಾನ ಮಂತ್ರಿಗಳು ಅಯೋಧ್ಯೆಯ ಪೂಜೆಗೆ ಆಗಮಿಸಿ ಇಂದು ಶ್ರೀ ರಾಮನಿಗೆ ವಂಚಿಸಿರುವ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ.
ಇನ್ನು ಉತ್ತರ ಪ್ರದೇಶದ ಬುಲ್ಡೆಜರ್ ಮುಖ್ಯಮಂತ್ರಿ ಯೋಗಿಆದಿತ್ಯನಾಥ ತಾನು ಕವಿ ಧರಿಸಿ ಧಾರ್ಮಿಕ ಧರ್ಮವನ್ನು ಕಾಪಾಡುತ್ತೇನೆ ಎಂದು ದಿನನಿತ್ಯ ಘೋಷಣೆ ಮಾಡುತ್ತಾರೆ,
ಆದರೆ ಇಂದು ಸ್ಥಳೀಯ ಅರ್ಚಕರು ಹಣ ಹಾಗೂ ಚಿನ್ನಾಭರಣವನ್ನು ಅಯೋಧ್ಯೆಯ ಶ್ರೀ ರಾಮನ ಮಂದಿರದ ಸನ್ನಿಧಿಯಿಂದ ಕೋಟಿಗಟ್ಟಲೆ ಹಣ ದೂಚಿದ್ದರು ಅದರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.
ಇಂತಹ ಬಿಜೆಪಿ ಭ್ರಷ್ಟರು ದೇಶದ ಪವಿತ್ರ ಸ್ಥಳವನ್ನು ಅಪವಿತ್ರ ಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೂಡಲೇ ಈ ಪ್ರಕರಣವನ್ನು ಘನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಾಗೂ ಚಿನ್ನಾಭರಣವನ್ನು ಲೂಟಿ ಮಾಡಿರುವ ಭ್ರಷ್ಟರನ್ನ ಜೈಲಿಗೆ ಹಾಕಬೇಕೆಂದು ಈ ಮೂಲಕ ಆಗ್ರಹ ಪಡಿಸಲಾಯಿತು,
ಶ್ರೀ ರಾಮನನ್ನ ವಂಚಿಸಿರುವ ನಕಲಿ ಹಿಂದೂ ಭಕ್ತರ ವಿರುದ್ಧ ಇಂದು ಶ್ರೀ ರಾಮನ ವೇಷಧಾರಿ ರವರ ಮೂಲಕ ಜನರ ಜಾಗೃತಿ ಅಭಿಯಾನವನ್ನು ನಡೆಸಿ ಸಾರ್ವಜನಿಕರಿಗೆ ಭಿತ್ತಿ ಪತ್ರ ನೀಡಿ ಶ್ರೀ ರಾಮನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಪಡಿಸಲಾಯಿತು.
ಹೋರಾಟದಲ್ಲಿ ಭಾಗಿಯಾದವರು ಎಸ್ ಮನೋಹರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಎ ಆನಂದ, ಪ್ರಕಾಶ್ ಜಿ, ಆದಿತ್ಯ , ಹೇಮರಾಜ್, ಆನಂದ್ ಕುಮಾರ್, ಕುಶಲ್ ಹರುವೇಗೌಡ, ಉಮೇಶ್ , ಸುಂಕದಕಟ್ಟೆ ನವೀನ್ , ರಂಜಿತ್ , ಪ್ರವೀಣ್ ರಾವ್ , ನವೀನ್ ಸಾಯಿ , ಅಪ್ಪು , ಮಂಜುನಾಥ್,ಪವನ್ , ಪುಟ್ಟರಾಜು ಹಲವಾರು ಕಾರ್ಯಕರ್ತರು
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ