Select Your Language

Notifications

webdunia
webdunia
webdunia
webdunia

ಹಿಂದೂ ಧರ್ಮ ಬೈತಿದ್ದವರಿಗೆ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಒಳ್ಳೆ ಪೋಸ್ಟ್ ಕೊಡ್ತಾರೆ: ಯತ್ನಾಳ್

Basangouwda Patil Yatnal
ಬೆಂಗಳೂರು: ರಾಹುಲ್ ಗಾಂಧಿ ಅಂತ ಒಬ್ಬ ವ್ಯಕ್ತಿ ಇದ್ದಾನಲ್ಲಾ, ದೇಶದ ವಿರುದ್ಧ ಮಾತನಾಡುವವರು, ಆರ್ ಎಸ್ಎಸ್ ವಿರುದ್ಧ ಮಾತನಾಡುವವರು, ಹಿಂದೂ ಧರ್ಮದ  ವಿರುದ್ಧ ಮಾತನಾಡುವವರಿಗೆ ಒಳ್ಳೆ ಪೋಸ್ಟ್ ಕೊಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿರುವ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ ಹಿಂದೂ ಧರ್ಮ ಮತ್ತು ಆರ್ ಎಸ್ಎಸ್ ವಿರುದ್ಧ ಮಾತನಾಡುವವರಿಗೆ ಒಳ್ಳೆ ಪೋಸ್ಟ್ ಸಿಗುತ್ತದೆ ಎಂದಿದ್ದಾರೆ.

‘ಈಗ ಬಿಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಅವರನ್ನು ನೋಡಿ. ಪ್ರಿಯಾಂಕ್ ಖರ್ಗೆಯನ್ನು ಗೃಹಸಚಿವ ಮಾಡಿರೋದು, ಅವರ ತಂದೆಯನ್ನು ರಾಷ್ಟ್ರೀಯ ಅಧ್ಯಕ್ಷ ಮಾಡಿದ್ದೂ ಅದೇ ಕಾರಣದಿಂದ, ಮತ್ತೇನೂ ಇಲ್ಲ. ಹಿಂದೂಗಳಿಗೆ ಬೈಯೋದು, ಹಗುರವಾಗಿ ಮಾತನಾಡಬೇಕು, ದೇಶದ ವಿರುದ್ಧ ಹೇಳಿಕೆ ಕೊಡಬೇಕು, ನಮ್ಮ ಪಾಕಿಸ್ತಾನ ಅನ್ನಬೇಕು.

ನಿನ್ನೆ ಶಿಗ್ಗಾಂವ್ ನಲ್ಲಿ ಒಬ್ಬ ಕಾಂಗ್ರೆಸ್ ಶಾಸಕರು ಪಾಕಿಸ್ತಾನ ನಮ್ಮ ವೈರಿ ಅಲ್ಲ, ಚೀನಾ ನಮ್ಮ ವೈರಿ ಅಂತಾರೆ. ಬಹುಶಃ ಅವನಿಗೂ ಏನಾದರೂ ಪ್ರಮೋಷನ್ ಸಿಗಬಹುದು ಇಷ್ಟರಲ್ಲೇ. ಅಂದರೆ ಈ ಕೆಟ್ಟ ಸಂಸ್ಕೃತಿ ರಾಹುಲ್ ಗಾಂಧಿ ಬಂದ ಮೇಲೆ ಹೆಚ್ಚಾಗಿದೆ’ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಲದಲ್ಲಿ ಎಲ್ಲರೆದುರೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ: ಭೀಕರ ದೃಶ್ಯ ವೈರಲ್ Video