Select Your Language

Notifications

webdunia
webdunia
webdunia
webdunia

ಫುಟ್ ಪಾತ್ ತೆರವು ಕಾರ್ಯಚರಣೆ, ಬೀದಿಬದಿ ವ್ಯಾಪಾರಿಗಳಿಗೆ ಮತ್ತೇ ಶಾಕ್ ಕೊಟ್ಟ ಕೃಷ್ಣ ಬೈರೇಗೌಡ

Minister Krishna Bairegowda
ಬೆಂಗಳೂರು: ಫುಟ್‌ಪಾತ್ ತೆರವು ಕಾರ್ಯಚರಣೆ ನಿಲ್ಲುವುದಿಲ್ಲ, ಮುಂದುವರೆಸುವುದಾಗಿ ಹೇಳುವ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಮತ್ತೆ ಶಾಕ್‌ ನೀಡಿದ್ದಾರೆ. 

ಮತ್ತೊಂದು ಕಡೆ ಬೆಂಗ ಳೂರಿನ ಹಲವು ಕಡೆ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ವ್ಯಾಪಾರಿಗಳು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಇದರ ವಿರುದ್ಧ ಹೋರಾಟಕ್ಕೆ ಬೀಬಿಬಂದಿ ವ್ಯಾಪಾರ ಸಮಿತಿ ಸಜ್ಜಾಗಿದೆ. 

ಕಳೆದ 8 ದಿನಗಳಿಂದ ಬೆಂಗಳೂರಿನಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಾ ಇದೆ. ಸುಮಾರು 430 ಕಿಮೀ ಫುಟ್‌ಪಾತ್‌ ತೆರವು ಆಗಿದೆ. ಇನ್ನೂ ಫುಟ್‌ಪಾತ್ ತೆರವಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಇದೀಗ ಬೀದಿಬದಿ ವ್ಯಾಪಾರಿಗಳ ಜತೆ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದ್ದಾರೆ. 

ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳ ಕೆಲವೊಂದು ಬೇಡಿಕೆಗಳನ್ನ ಈಡೇರಿಸುವುದರ ಬಗ್ಗೆ ಚರ್ಚೆ ಆಗಿದೆ. ಆದರೆ ಯಾವುದೇ ಕಾರಣಕ್ಕೂ ಫುಟ್‌ಪಾತ್‌ ತೆರವು ಕಾರ್ಯಾಚರಣೆ ಸ್ಥಗಿತ ಆಗಲ್ಲ, ಮುಂದುವರಿಯುತ್ತದೆ ಎಂದು ಸಚಿವರು ಹೇಳಿದ್ದಾರೆ. ‌

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರವೇ ತೆರವು ಕಾರ್ಯಾಚರಣೆ ಆಗ್ತಿದೆ. 18 ಸಾವಿರ ರಸ್ತೆಗಳಲ್ಲಿ ಬರೀ ಒಂದೂವರೆ ಸಾವಿರ ರಸ್ತೆಗಳಲ್ಲಿ ಮಾತ್ರ ತೆರವು ಮಾಡ್ತಾ ಇದ್ದೇವೆ ಎಂದು ಹೇಳಿದರು.  

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಧರ್ಮ ಬೈತಿದ್ದವರಿಗೆ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಒಳ್ಳೆ ಪೋಸ್ಟ್ ಕೊಡ್ತಾರೆ: ಯತ್ನಾಳ್