ರೌಡಿಗಳೇ ಹುಷಾರ್ : ಬರ್ತಿದೆ ಆ್ಯಂಟಿ ಗೂಂಡಾ ಸ್ಕ್ಯಾಡ್

Webdunia
ಭಾನುವಾರ, 29 ಸೆಪ್ಟಂಬರ್ 2019 (18:26 IST)
ಹುಬ್ಬಳ್ಳಿ - ಧಾರವಾಡದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಆ್ಯಂಟಿ ಗೂಂಡಾ ಸ್ಕ್ಯಾಡ್ ರಚನೆ ಮಾಡಲಾಗುತ್ತಿದೆ.

ಹೀಗಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹು-ಧಾ ಕಮಿಷ್ನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ ಅಧಿಕಾರಿಗಳ ಜೊತೆಯ ಸಭೆಯ ಬಳಿಕ ಮಾತನಾಡಿದ ಅವರು, ನಗರದಲ್ಲಿ ಶೂಟೌಟ್, ಚಾಕು ಇರಿತ ಪ್ರಕರಣಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ‌.

ಈ ಹಿನ್ನೆಲೆಯಲ್ಲಿ ಆ್ಯಂಟಿ ಗೂಂಡಾ ಸ್ಕ್ಯಾಡ್ ರಚನೆ ಮಾಡಲಾಗುತ್ತಿದ್ದು, ಇದರ ಮೂಲಕ ಪ್ರತಿವಾರ ಎಡಿಜಿಪಿಗೆ ವರದಿ ಸಲ್ಲಿಸಲು ಪೊಲೀಸ ಆಯುಕ್ತರಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. 

ಅಲ್ಲದೇ, ರಾಜ್ಯದ ಸೂಕ್ಷ್ಮ ಠಾಣೆಗಳನ್ನು ಗುರ್ತಿಸಿ ಎಡಿಜಿಪಿ ಕಚೇರಿಯಿಂದಲೇ ನಿಯಂತ್ರಣ ಮಾಡಲಾಗುವುದು. ಅಪರಾಧಗಳೊಂದಿಗೆ ಪೊಲೀಸರ ಒಡನಾಟ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಹಲವಾರು ವರ್ಷಗಳಿಂದ ಒಂದೆಡೆ ಠಿಕಾಣಿ ಹೂಡಿರುವ ಪೊಲೀಸರ ವರ್ಗಾವಣೆ ಮಾಡಲಾಗುವುದು ಎಂದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕದ ಈ ಜಿಲ್ಲೆಗಳಿಗೆ ಭಾನುವಾರ ರೆಡ್ ಅಲರ್ಟ್

ನನ್ನ ಮಗಳು ಮಿಡಲ್ ಫಿಂಗರ್ ತೋರಿಸಿಲ್ಲ, ಅವಳಿಗೆ ಗಾಯವಾಗಿತ್ತು ಎಂದ ಸಿಯಾ ಗೋಯಲ್ ತಂದೆ: ನೆಟ್ಟಿಗರ ಪ್ರತಿಕ್ರಿಯೆ ನೋಡಿ

ರಾಜ್ಯದಲ್ಲಿ ಎಸ್‍ಐಆರ್ ದುರ್ಬಳಕೆಗೆ ಕಾಂಗ್ರೆಸ್ ಕತ್ತೆಗಳೇ ಕಾರಣ: ವಿಜಯೇಂದ್ರ

ಪತ್ನಿ, ಮಕ್ಕಳ ಮೇಲೆ ಹಲ್ಲೆ ನಡೆಸಿ ಸ್ವತಃ ತಾನೇ ಮನೆಗೆ ಬೆಂಕಿ ಹಚ್ಚಿಕೊಂಡು ಪರಾರಿಯಾದ ಉದ್ಯಮಿ Video

ಮತಪಟ್ಟಿ ಅಕ್ರಮದ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಮುಂದಿನ ಸುದ್ದಿ
Show comments