ನಗರದಲ್ಲಿ ನಕಲಿಜಾಲ ಹೊಸದೇನೂ ಅಲ್ಲ. ಆಹಾರವನ್ನ ಬಿಡದ ಕಳ್ಳರು ಇನ್ನೂ ಪೇಂಟ್ ಬಿಡ್ತಾರಾ?. ಕೋಟಿ ಕೋಟಿ ಕರ್ಚು ಮಾಡಿ ಮನೆ ಕಟ್ಟಿಸಿರೋ ನಮ್ಮ ಮನೆ ಚೆನ್ನಾಗಿರ್ಲಿ ಸ್ವಲ್ಪ ಕಾಸ್ಟ್ಲಿ ಆದ್ರೂ ಪರವಾಗಿಲ್ಲ ಅಂತ ಬ್ರಾಂಡೇಂಡ್ ಪೇಂಟ್ ಮಾಡಿಸ್ತಾರೆ. ಕಳ್ಳರ ಪಾಲಿಗೆ ಇದೇ ವರದಾನವಾಗಿದ್ದು ಪ್ರತಿಷ್ಠಿತ ಪೇಂಟ್ ಬ್ರಾಂಡ್ ಆದ ಏಷ್ಯನ್ಸ್ ಪೇಂಟ್ಸ್ ನಕಲಿ ಮಾಡಿ ಮಾರಾಟ ಮಾಡ್ತಿದ್ದ ಜಾಲ ಪತ್ತೆಯಾಗಿದೆ.
ಈ ಬಗ್ಗೆ ಏಷ್ಯನ್ ಪೇಂಟ್ಸ್ ಕಂಪನಿಯಿಂದಲೇ ವಿವಿಪುರಂ ಠಾಣೆಗೆ ದೂರು ದಾಖಲಾಗಿದೆ.ದೂರು ದಾಖಲಿಸಿ ಆರೋಪಿ ಲಾಲ್ ನನ್ನ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.ಲಾಲ್ ಕಳೆದ ಹತ್ತು ವರ್ಷಗಳಿಂದ ನಕಲಿ ಪೇಂಟ್ ಮಾರಾಟ ಮಾಡ್ತಿತ್ತು,ಲಾಲ್ ತನ್ನದೇ ಆದಂತಹ ಪೇಂಟ್ ಶೋ ರೂಮ್ ಹೊಂದಿದ್ದ.ಇದ್ರಿಂದ ಪೇಂಟ್ ಬಗ್ಗೆ ಬಹುತೇಕ ಎಲ್ಲಾ ಅರಿತಿದ್ದ ಲಾಲ್ ಪ್ರತಿಷ್ಠಿತ ಪೇಂಟ್ ಕಂಪನಿ ಹೆಸರು ಬಳಸಿ ಮೋಸ ಮಾಡ್ತಿದ್ದ.ಕಳೆದ ಹತ್ತು ವರ್ಷಗಳಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪೇಂಟ್ ಗಳನ್ನು ಮಾರಾಟ ಮಾಡಿದ್ದು, ನಕಲಿ ಪೇಂಟ್ ಗೆ ಏಷ್ಯನ್ ಪೇಂಟ್ಸ್ ನ ಸ್ಟಿಕ್ಕರ್ ಸೇರಿದಂತೆ, ಪೇಂಟ್ ಪ್ರೊಡೆಕ್ಷನ್ ನನ್ನು ಸಹ ನಕಲು ಮಾಡಿ ಮಾರಾಟ ಮಾಡಿರೋ ಆರೋಪ ಕೇಳಿ ಬಂದಿದೆ.
ಈ ನಕಲಿ ಆಟದ ಬಗ್ಗೆ ಏಷ್ಯನ್ಸ್ ಪೇಂಟ್ಸ್ ಡಿಸ್ಟ್ರಿಬ್ಯೂಟರ್ ಗಳಿಗೆ ಮಾಹಿತಿ ಗೊತ್ತಾಗಿ ವಿವಿ ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ರು.ಸ್ಯಾಂಪಲ್‌ಗಾಗಿಯು ಸಹ ಒಂದು ಪೇಂಟ್‌ನನ್ನು ಖರೀದಿ ಮಾಡಿ ಪರಿಕ್ಷೆ ಮಾಡಲಾಗಿತ್ತು.ಪರೀಕ್ಷೆಯಲ್ಲಿ ನಕಲಿ ಪೇಂಟ್ ಅನ್ನೋದು ಪತ್ತೆಯಾದ ಹಿನ್ನೆಲೆ ಪ್ರಕರಣ ದಾಖಲಿಸಿ ಆರೋಪಿ ಬಂಧಿಸಲಾಗಿದೆ.