Select Your Language

Notifications

webdunia
webdunia
webdunia
webdunia

ಮದುವೆಗಳಲ್ಲಿ ಓಪನ್ ಬಾರ್ಗೆ ಅನುಮತಿ ನೀಡಿ : ಕೊಡಗಿನ ಜನರ ಮನವಿ

ಮದುವೆಗಳಲ್ಲಿ ಓಪನ್ ಬಾರ್ಗೆ ಅನುಮತಿ ನೀಡಿ : ಕೊಡಗಿನ ಜನರ ಮನವಿ
ಮಡಿಕೇರಿ , ಶನಿವಾರ, 15 ಏಪ್ರಿಲ್ 2023 (10:18 IST)
ಮಡಿಕೇರಿ : ಜಿಲ್ಲೆಯ ಜನರು ಮದುವೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣೆ ಆಯೋಗದ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಮದುವೆ ಸಮಾರಂಭ ಇಟ್ಟುಕೊಂಡವರು ಕಂಗಾಲಾಗಿದ್ದಾರೆ.
 
ಹೌದು. ಕೊಡಗು ಅಂದ್ರೆ ಅಲ್ಲಿ ಒಂದಲ್ಲೊಂದು ವಿಶೇಷ. ವೈಶಿಷ್ಟ್ಯ ಕಾಣಸಿಗುತ್ತದೆ. ಇಲ್ಲಿಯ ಆಚಾರ-ವಿಚಾರಗಳು ಕೂಡ ವಿಭಿನ್ನ. ಸದ್ಯ ವಿವಾಹವಾಗಲು ಚೈತ್ರ ಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ.

ಕೊಡಗಿನಲ್ಲಿ ಪ್ರತಿ ಮದುವೆ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಇದೀಗ ಮದುವೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆಗಳನ್ನು ಮಾಡಬಾರದು ಎಂದು ಅಬಕಾರಿ ಇಲಾಖೆ ಆದೇಶ ಹೊರಡಿಸಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟು ಸಮಯ ಚುನಾವಣೆಗಳಲ್ಲಿ ಈ ರೀತಿಯ ಮಾನದಂಡಗಳು ಹಾಕಿರಲ್ಲಿಲ್ಲ. ಆದರೆ ಈ ಬಾರಿ ಮದುವೆ ಕಾರ್ಯಕ್ರಮಗಳಿಗೆ ಮದ್ಯದ ವ್ಯವಸ್ಥೆಗಳನ್ನು ನಿಬರ್ಂಧ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗುವುದಿಲ್ಲ. ಕೊಡಗಿನಲ್ಲಿ ಮದ್ಯ ಸೇವನೆ ಮಾಡುವುದು ಸಂಸ್ಕøತಿಯ ಒಂದು ಭಾಗವಾಗಿದೆ. ಇದು ನಮ್ಮ ಸಂಸ್ಕøತಿಯನ್ನು ಕಸಿದುಕೊಳ್ಳುವ ಕೆಲಸ ಆಗಿದೆ ಎಂದು ಕೊಡಗಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಷರತ್ತಿಲ್ಲದೇ ಸವದಿ ಕಾಂಗ್ರೆಸ್ ಸೇರ್ಪಡೆ