Publish Date: Fri, 07 Apr 2023 (09:44 IST)
Updated Date: Fri, 07 Apr 2023 (09:46 IST)
ನ್ಯೂಯಾರ್ಕ್ : ಶತಕೋಟಿ ಉದ್ಯಮಿ, ಮಾಧ್ಯಮ ದೊರೆ 92 ವರ್ಷದ ರೂಪರ್ಟ್ ಮುರ್ಡೋಕ್ 5ನೇ ಮದುವೆಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಿದ್ದಾರೆ.
ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಉಳಿದ ಜೀವನ ಆಕೆಯೊಂದಿಗೆ ಕಳೆಯಲು ನಿರ್ಧರಿಸಿದ್ದರು. ಆದರೆ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಆದ ಒಂದೇ ವಾರದಲ್ಲಿ ಮದುವೆ ಪ್ಲಾನ್ ಕೈಬಿಟ್ಟಿದ್ದಾರೆ.
ಕಳೆದ ತಿಂಗಳು ಮುರ್ಡೋಕ್ ಮದುವೆಯಾಗಲು ಉತ್ಸುಕರಾಗಿದ್ದರು. ಆದರೀಗ ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣಕ್ಕೆ ಮದುವೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ, ಅವರು ಅಹಿತಕರವಾಗಿದ್ದಾರೆ ಎಂದು ಮುರ್ಡೋಕ್ ಆಪ್ತ ಮೂಲಗಳು ತಿಳಿಸಿವೆ.