ಚಿಕ್ಕಬಳ್ಳಾಪುರ : ತನ್ನ ಪ್ರಿಯತಮೆ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆಂದು ಕಲ್ಯಾಣ ಮಂಟಪಕ್ಕೆ ನುಗ್ಗಿ ಪಾಗಲ್ ಪ್ರೇಮಿಯೊಬ್ಬ ರಂಪಾಟ ಮಾಡಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮುಂದಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
 
ನಿತೀಶ್ ಎಂಬಾತ ಮದುವೆ ಮಂಟಪದಲ್ಲಿ ಗಲಾಟೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದಾತ. ಈತ ಮೂಲತಃ ಬೆಂಗಳೂರಿನ ಗೋರಿಪಾಳ್ಯದವನು. ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬಂದಿದ್ದಾನೆ.
 
 			
 
 			
			                     
							
							
			        							
								
																	ಜತೆಗೆ ಕ್ಷೇತ್ರಕ್ಕೆ ಬಂದವನೆ ಸೀದಾ ದೇವಸ್ಥಾನದ ಪಕ್ಕದಲಿರುವ ಖಾಸಗಿ ಕಲ್ಯಾಣ ಮಂಟಪಕ್ಕೆ ತೆರಳಿದ್ದು ಎಲ್ಲರೂ ಮದುವೆಗೆ ಬಂದವನು ಅಂತಲೆ ಅಂದುಕೊಂಡಿದ್ದಾರೆ. ಆದ್ರೆ ಅಷ್ಟರಲ್ಲೇ ನೋಡ ನೋಡ್ತಿದ್ದಂತೆ ಯುವತಿಯ ವಿರುದ್ದ ಕೂಗಾಡಿದ ಪಾಗಲ್ ಪ್ರೇಮಿ ತನನ್ನ ಪ್ರೀತಿಸಿ ಬೇರೊಬ್ಬನನ್ನ ಮದುವೆಯಾಗ್ತಿದ್ದಿಯಾ ಅಂತ ಗಲಾಟೆ ಮಾಡಿದ್ದಾನೆ. 
									
										
								
																	ಈ ವೇಳೆ ಕಲ್ಯಾಣ ಮಂಟಪದಲ್ಲಿದ್ದ ಯುವತಿಯ ಸಂಬಂಧಿಕರು ಯುವಕನನ್ನ ಥಳಿಸಿದ್ದು, ನಂತರ ಕಲ್ಯಾಣ ಮಂಟಪದಿಂದ ಹೊರಗೆ ಹಾಕಿದ್ದಾರೆ. ಈ ವೇಳೆ ಮತ್ತದೇ ವಿಚಾರಕ್ಕೆ ಯುವಕ ಮತ್ತು ಯುವತಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು, ಯುವತಿಗಾಗಿ ಯುವಕನೇ ಬ್ಲೇಡ್ನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.