Publish Date: Fri, 07 Apr 2023 (09:28 IST)
Updated Date: Fri, 07 Apr 2023 (09:30 IST)
ನವದೆಹಲಿ : ದೇಶದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಕಾನೂನು ವ್ಯವಸ್ಥೆಯ ಸವಾಲುಗಳ ವಿರುದ್ಧ ಹೋರಾಡಲು ಬಿಜೆಪಿ ನಿರ್ಧರಿಸಿದೆ. ಅದಕ್ಕಾಗಿ ಭಗವಾನ್ ಹನುಮನಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ಹನುಮನಿಂದ ಬಿಜೆಪಿ ಸ್ಫೂರ್ತಿ ಪಡೆದಿದೆ. ಭಕ್ತಿ, ಶಕ್ತಿ ಮತ್ತು ಧೈರ್ಯಕ್ಕಾಗಿ ಪೂಜಿಲ್ಪಟ್ಟಿದೆ. ಹನುಮನಂತೆ ಇಂದು ಭಾರತ ವಿಶ್ವದ ಸವಾಲುಗಳನ್ನ ಎದುರಿಸಲು ಸದೃಢವಾಗಿದೆ ಎಂದು ಶ್ಲಾಘಿಸಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭ್ರಷ್ಟಾಚಾರ, ಜಾತೀಯತೆ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದ್ದರೆ, ದೊಡ್ಡ ಕನಸುಗಳನ್ನು ಹೊಂದುವುದು ಮತ್ತು ಅವುಗಳನ್ನು ಈಡೇರಿಸುವ ಮೂಲಕ ಬಿಜೆಪಿ ವಿಭಿನ್ನ ಪಕ್ಷವಾಗಿ ಗುರುತಿಸಿಕೊಂಡಿದೆ.