Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಸೇರಿದ ಲಕ್ಷ್ಮಣ್ ಸವದಿ

Laxman Savadi joined BJP
bangalore , ಶನಿವಾರ, 15 ಏಪ್ರಿಲ್ 2023 (14:00 IST)
ಲಕ್ಷ್ಮಣ ಸವದಿ ಬಿಜೆಪಿ MLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಕ್ಷಣ್ ಸವದಿ ಮೇಲ್ಮನೆ ಸಭಾಪತಿ ಬಸವರಾಜ್ ಹೊರಟ್ಟಿ ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದು, ಹೊರಟ್ಟಿ ಸರ್ಕಾರಿ ನಿವಾಸಕ್ಕೆ ಸವದಿ ಆಗಮಿಸಿ ರಾಜೀನಾಮೆ ಸಲ್ಲಿಸಿದ್ಧಾರೆ.ಇನ್ನೂ ಇದೇ ವೇಳೆ ಲಕ್ಷ್ಮಣ ಸವದಿ ರಾಜೀನಾಮೆ ನೀಡಿದ ಬಳಿಕ ಮಾತನಾಡಿ ಈ ಕ್ಷಣದಿಂದ ನನಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.ನಾನು ಸತ್ತೂರು ನನ್ನ ಹೆಣ ಬಿಜೆಪಿ ಕಚೇರಿ ಮುಂದೆ ಹೋಗೋದು ಬೇಡ ಅಂತಾ ಹೇಳ್ತಿನಿ...ನಾನು ಕಾಂಗ್ರೆಸ್ ಪಕ್ಷ ಸೇರಿಕೊಳ್ತಿನಿ, ಅಥಣಿಯಿಂದ ಸ್ಪರ್ಧೆ ಮಾಡ್ತಿನಿ ಈ ಭಾರಿ ಗೆದ್ದು ಬರುತ್ತೀನಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಭಾಪತಿ ಬಸವರಾಜ್​ ಹೊರಟ್ಟಿ ಪ್ರತಿಕ್ರಿಯಿಸಿ ಇಂದು ಸವದಿ ಅವರು ಇಂದು ತಮ್ಮ ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನ ನಾನು ಅಂಗೀಕಾರ ಮಾಡಿದ್ದೀನಿ ಎಂದು ಹೇಳಿದ್ದಾರೆ.....ಲಕ್ಷ್ಮಣ ಸವದಿ ಬಿಜೆಪಿಗೆ ಬಿಗ್​ ಶಾಕ್​ ಕೊಟ್ಟಿದ್ದು, ಇಂದು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ... ಸವದಿ ಸಿದ್ದು, ಡಿಕೆಶಿ ಜತೆ ಸಮಾಲೋಚನೆ ಮಾಡಿದ್ದು, ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಲಕ್ಷ್ಮಣ ಸವದಿ ಸಿದ್ದು ನಿವಾಸದ ಮುಂದೆ ಘೋಷಣೆ ಮಾಡಿದ್ದರು. ಯಾವುದೇ ಷರತ್ತು ಹಾಕದೇ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ, ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುತ್ತೇವೆ ಎಂದಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ?