Select Your Language

Notifications

webdunia
webdunia
webdunia
webdunia

ಎಂ ಎಲ್ ಸಿ ಬೋಜೇಗೌಡ ಕಾರಿನ ಪ್ಲೇಟ್ ನಂಬರ್ ನಕಲಿ ಮಾಡಿದವರು ಅಂದರ್

MLC Bojegowda's car plate number was forged by Andr
bangalore , ಶನಿವಾರ, 15 ಏಪ್ರಿಲ್ 2023 (14:29 IST)
ಜೆಡಿಎಸ್ ಎಂ ಎಲ್ ಸಿ ಭೋಜೇಗೌಡರ ಕಾರಿನ ನಂಬರ್ ಪ್ಲೇಟ್ ನಕಲಿ ಮಾಡಿದ್ದ ಪ್ರಕರಣ ಸಂಬಂಧ ಹೈಗ್ರೌಂಡ್ ಪೋಲೀಸರು 6 ಮಂದಿ ಆರೋಪೊಗಳನ್ನ ಬಂಧಿಸಿದ್ದರು. ಇದೀಗ ಪ್ರಕರಣದ ಆರೋಪಿಗಳಿಂದ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
 
ಪ್ರಕರಣದ ಎ 2 ಆರೋಪಿ ಮಂಜುನಾಥ್ ಹಾಗೂ ಎ3 ಆರೋಪಿ ಶಾಬಾಜ್  ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಬೇಲ್ ಮೇಲೆ ರಿಲೀಸ್ ಆಗಿರುವ ಆರೋಪಿಗಳಿಗೆ ಹೈಗ್ರೌಂಡ್ ಪೊಲೀಸರು ವಿಪರೀತ ಕಿರುಕುಳ ಕೊಡ್ತಿದ್ದಾರಂತೆ. ಇಬ್ಬರೂ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದು ಇದನ್ನರಿತ ಪೊಲೀಸರು, ಹಣ ಹಾಗೂ ಸೈಟು ಕೊಡುವಂತೆ ಕೇಳುತ್ತಿದ್ದಾರಂತೆ. ಹೈಗ್ರೌಂಡ್ ಎ ಎಸ್ ಐ ಗಣೇಶ್ ಸೇರಿದಂತೆ ಹಲವರು ಪ್ರತಿನಿತ್ಯ ಕರೆ ಮಾಡಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಶಬಾಸ್ ಬಳಿಯಿಂದ ನಾಲ್ಕು ಐ ಪೋನ್ ಹಾಗೂ ಮಂಜುನಾತ್ ಬಳಿ 5 ಲಕ್ಷ ಕ್ಯಾಶ್ ಪಡೆದಿದ್ದಾರಂತೆ. ಇಷ್ಟಾದ್ರು ಪ್ರತಿನಿತ್ಯ ಕರೆ ಮಾಡಿ ಮತ್ತಷ್ಟು ಹಣಕ್ಕೆ ಡಿಮಾಂಡ್ ಮಾಡುತ್ತಿದ್ದಾಗಿ ಹಾಗೂ ಕೊಡದಿದ್ದರೆ ಬೇರೆ ಠಾಣೆಯಲ್ಲೂ ಕೇಸ್ ಹೆದರಿಸುತ್ತಿದ್ದಾರಂತೆ. 

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಘೋಷ್ಟಿ ನಡೆಸಿದ ಇಬ್ಬರು  ತಮ್ಮ ಅಳಲನ್ನ ತೋಡಿಕೊಂಡಿದ್ದು, ನಾವು ನ್ಯಾಯಯುತವಾಗೇ ದಾಖಲಾತಿಗಳನ್ನ ಪರಿಶೀಲನೆ ಮಾಡಿ ಕಾರು ತೆಗೆದುಕೊಂಡಿದ್ವಿ. ಆದ್ರೆ ಕಾರಿನ ದಾಖಲೆಗಳು ಹಾಗೂ ಚಾರ್ಸಿ ನಂಬರ್ ಸಮೇತ ನಕಲಿ ಮಾಡಿ ನಮ್ಮನ್ನ ಮೋಸ ಮಾಡಿದ್ದಾರೆ. ಇದಾವುದನ್ನೂ ಪರಿಗಣಿಸದ ನಮ್ಮನ್ನ ಪೊಲೀಸರು ಆರೋಪಿಗಳಾಗಿಸಿದ್ದಾರೆ. ಕಾರು ಖರೀದಿ ಮಾಡಿದ್ದೇ ನಮ್ಮ ತಪ್ಪಾ ಎಂದು ಅಳಲು ತೋಡಿಕೊಂಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ?