Select Your Language

Notifications

webdunia
webdunia
webdunia
webdunia

ರಜೆಗೆ ಒತ್ತಾಯಿಸಿ ಸಿಎಂಗೆ ಪತ್ರ ಬರೆದ ಅಶೋಕ್‌

 ಅಶೋಕ್‌

geetha

bangalore , ಭಾನುವಾರ, 21 ಜನವರಿ 2024 (21:01 IST)
ಬೆಂಗಳೂರು: ರಾಮನ ಪ್ರಾಣ ಪ್ರತಿಷ್ಟಾಪನೆ ನೋಡಲು ಜನರಲ್ಲಿ ಕಾತರತೆ ಇದೆ. ಹಿಂದೆ ಸೋಮನಾಥ ದೇವಾಲಯ ಪಟೇಲರು ನಿರ್ಮಾಣ ಮಾಡಿದ್ರು. ಈಗ ಮೋದಿ ಅವರ ನೇತೃತ್ವದಲ್ಲಿ ಅದೇ ರೀತಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ಆಗ್ತಿದೆ. ವಿಗ್ರಹ ಕರ್ನಾಟಕದಲ್ಲಿ ಸಿದ್ದವಾಗಿರುವುದೂ ಸಹ ನಮ್ಮ ಸಂಭ್ರಮ ಹೆಚ್ಚಲು ಕಾರಣವಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಇಲ್ಲಿ ಕೂಡ ಪೂಜೆ ನೋಡಲು ಅರ್ಧ ದಿನ ರಜೆ ಘೋಷಣೆಗೆ ಬೇಡಿಕೆ ಇಟ್ಟಿದ್ದಾರೆ. ಜನರಿಗೆ ಯಾವುದೇ ರೀತಿ ಆಚರಣೆಗೆ ತೊಂದರೆ ಆಗದಂತೆ, ತಾವು ರಜೆ ಘೋಷಣೆ‌ ಮಾಡಬೇಕು ಎಂದು ಆರ್‌ ಅಶೋಕ್‌ ಒತ್ತಾಯಿಸಿದರು.

 ಇಡೀ ದೇಶವೇ ಕಾತುರದಿಂದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕಾಯುತ್ತಿದೆ. ಈ ವೇಳೆ ರಾಜ್ಯದ ಶಾಲಾಕಾಲೇಜುಗಳಿಗೆ ರಜೆ ಘೋಷಿಸದೆ ಹಿಂದೂಗಳ ಭಾವನೆಗೆ ಧಕ್ಕೆ ತರಬಾರದು ಎಂದು ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಜೆಗೆ ಒತ್ತಾಯಿಸಿ ಯಾರೂ ಪತ್ರ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಹೀಗಾಗಿ ನಾನು ಪತ್ರ ಕಳಿಸಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರವು ಹಿಂದೂ ವಿರೋಧಿ ಅನ್ನೋದು ಇತಿಹಾಸ ಪುಟ ಸೇರಬಾರದು ಎಂದಿದ್ದರೆ ಕೂಡಲೇ ರಜೆ ಘೋಷಣೆ ಮಾಡಿ ಎಂದು ಆಗ್ರಹಿಸಿದ ಆರ್‌. ಅಶೋಕ್‌, ಶಾಲೆಗಳ ಮಕ್ಕಳು ರಜೆ ಹಾಕಿದ್ರೆ ಶಿಕ್ಷೆ ಕೊಡ್ತೀವಿ, ಸಾವಿರ ರೂ ಫೈನ್ ಹಾಕ್ತೀವಿ ಅಂತ‌ ಹೇಳಿದ್ದಾರೆ. ಈ ರೀತಿಯ ಅತಿರೇಕದ ಪ್ರವೃತ್ತಿ ತೋರುವವರಿಗೆ ಪಾಠ ಕಲಿಸಬೇಕಾಗಲಿದೆ ಎಂದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮಾರಕಾಸ್ತ್ರ ಹಿಡಿದು ಪುಡಿರೌಡಿಯ ರೀಲ್ಸ್‌