Select Your Language

Notifications

webdunia
webdunia
webdunia
webdunia

ಮನುಷ್ಯನ ಮೂತ್ರದಿಂದ ಸಿರಾಮಿಕ್ ಗೆ ಹೊಳಪು ನೀಡಬಹುದಂತೆ. ಹೇಗೆ ಗೊತ್ತಾ?

ಮನುಷ್ಯನ ಮೂತ್ರದಿಂದ  ಸಿರಾಮಿಕ್ ಗೆ ಹೊಳಪು ನೀಡಬಹುದಂತೆ. ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 3 ಜೂನ್ 2019 (06:44 IST)
ಬೆಂಗಳೂರು : ಮನುಷ್ಯನ ದೇಹ ಯಾವುದೇ ಉಪಯೋಗವಿಲ್ಲವೆಂದು ಹೊರಹಾಕುವ ಮೂತ್ರದಿಂದ ಸಿರಾಮಿಕ್ ಮೆರುಗು ಹೆಚ್ಚಿಸಬಹುದು ಎಂದು ಅನ್ವೇಷಣೆಯೊಂದರಿಂದ ತಿಳಿದುಬಂದಿದೆ.



ಬಹಳ ಹಿಂದಿನ ಕಾಲದಲ್ಲಿ ಮಡಿಕೆಗಳನ್ನು ಮಾಡುವಾಗ ಬೂದಿ, ಸೋಡಾ ಮತ್ತು ಮರಳಿನ ಮಿಶ್ರಣಗಳನ್ನು ಬಳಸಿ ಅದಕ್ಕೆ ಹೊಳಪು ಕೊಡುತ್ತಿದ್ದರು. ನಂತರ ಪೀಳಿಗೆಯವರು ಸ್ವಲ್ಪ ಮುಂದುವರಿದು ಗಾಜು ಮತ್ತು ಆಕ್ಸೈಡ್ ಮಿಶ್ರಣಗಳ ಸಹಾಯದಿಂದ ಮೆರಗು ನೀಡುತ್ತಿದ್ದರು. ಆದರೆ ಇದೀಗ ಮೂತ್ರದಲ್ಲಿ ಕಂಡುಬರುವ ಗ್ಲೇಜಸ್, ಮಣ್ಣಿನ ಅಂಶಗಳು
ಸಿರಾಮಿಕ್ ಮೇಲ್ಮೈಯಲ್ಲಿ ಹೊಳಪು, ಅಪಾರದರ್ಶಕ ಹೊದಿಕೆಯನ್ನು ರೂಪಾಂತರಿಸಲು ಸಹಾಯಕವಾಗುತ್ತಿವೆ.


 

ಡಿಸೈನರ್ ಕಿಮ್ ಎಂಬಾತ ಇದನ್ನು ಕಂಡುಹಿಡಿದಿದ್ದು, ಅದಕ್ಕಾಗಿ ಆತ ಮಾನವನ ಮೂತ್ರವನ್ನು ಐದು ತಿಂಗಳವರೆಗೆ ಸಂಗ್ರಹಿಸಿ ನಂತರ ನೀರನ್ನು ಆವಿಯಾಗುವ ಮೂಲಕ ಮೂತ್ರವನ್ನು ಬಟ್ಟಿ ಇಳಿಸಿ, ಅದರಿಂದ ಒಂದು ದ್ರಾವಣವನ್ನು ಹೊರತೆಗೆದ. ಆ ಬಳಿಕ ಆ ಮಿಶ್ರಣದ ಪೇಸ್ಟ್ ಅನ್ನು ಮಡಿಕೆ ತಯಾರಿಕೆಯಲ್ಲಿ ಬಳಸಿ ಹೊಳಪು ಬರುವಂತೆ ಮಾಡಿದ.

 

 


Share this Story:

Follow Webdunia kannada

ಮುಂದಿನ ಸುದ್ದಿ

ದೋಸ್ತಿ ಸರ್ಕಾರ ಉರುಳಿಸಲು ಬಿಜೆಪಿ ಹೈಕಮಾಂಡ್ ಸೂಚನೆ