Select Your Language

Notifications

webdunia
webdunia
webdunia
webdunia

ಅರಮನೆಗೆ ಗಜಪಡೆ ಆಗಮನ

ಅರಮನೆಗೆ ಗಜಪಡೆ ಆಗಮನ
mysore , ಗುರುವಾರ, 11 ಆಗಸ್ಟ್ 2022 (18:39 IST)
2022ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ  ಅರಮನೆಗೆ ದಸರಾ ಗಜಪಡೆ ಆಗಮಿಸಿವೆ. ಅಭಿಮನ್ಯು ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ ಗಜಪಡೆ ಆಗಮಿಸಿವೆ. ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಭೀಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮೀ, ಮಹೇಂದ್ರ ಸೇರಿ ಎಲ್ಲಾ ಆನೆಗಳಿಗೂ ಅರಣ್ಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್​ಟಿ ಸೋಮಶೇಖರ್‌ರಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಿದರು. ಪೂಜೆ ಸಲ್ಲಿಸಿದ ನಂತರ ಅಶೋಕಪುರಂ, ಬಲ್ಲಾಳ್ ವೃತ್ತ, ಆರ್ ಟಿ ಓ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ‌ ರಸ್ತೆ, ಗನ್ ಹೌಸ್ ವೃತ್ತ ದಸರಾ ವಸ್ತು ಪ್ರದರ್ಶನದ ರಸ್ತೆಯಿಂದ ಮೆರವಣಿಗೆ ಮೂಲಕ ಅರಮನೆಗೆ ಆಗಮಿಸಿದವು. ಇಂದಿನಿಂದ ಅರಮನೆಯಲ್ಲೇ ದಸರಾ ಗಜಪಡೆ ಬೀಡು ಬಿಡಲಿವೆ. ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ನಂತರ ಲಾರಿಗಳ ಮೂಲಕ‌ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿಗೆ ಆನೆಗಳು ಆಗಮಿಸಿದವು. ಈ ಬಾರಿ 14 ಆನೆಗಳು ಮೈಸೂರು ದಸರೆಯಲ್ಲಿ‌ ಭಾಗವಹಿಸಲಿವೆ. ಅದ್ದೂರಿ ಹಾಗೂ ಸಾಂಪ್ರದಾಯಿಕ ದಸರೆಗೆ ಸರ್ಕಾರ ಸಿದ್ದತೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯರ 351ನೇ ಆರಾಧನಾ ಮಹೋತ್ಸವ