ಮೈಸೂರು : ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ರ ದಶಮಿ ಆಚರಣೆ 9 ದಿನಕ್ಕೆ ಸೀಮಿತಗೊಳಿಸಲಾಗಿದೆ.
ಭಾರತೀಯ ಪಂಚಾಂಗದ ಪ್ರಕಾರ 9 ದಿನ ದಶಮಿ ಆಚರಣೆ ಮಾಡಲಾಗುತ್ತಿದ್ದು, ಅ.7 ರಂದು ಆರಂಭವಾಗಿ ಅ.15 ಕ್ಕೆ ದಸರಾ ಮುಕ್ತಾಯವಾಗಲಿದೆ. ಈ ಬಾರಿ ತೃತೀಯ ಹಾಗೂ ಚತುರ್ಥಿ ಒಂದೇ ದಿನ ಹಾಗೂ ಚತುರ್ತಿ ಹಾಗೂ ಪಂಚಮಿ ಸಹ ಒಂದೇ ದಿನ ಹಿನ್ನೆಲೆಯಲ್ಲಿ 9 ದಿನ ದಶಮಿ ಆಚರಣೆ ಮಾಡಲಾಗುತ್ತಿದೆ.
ಮೊದಲ ದಿನ ಶೈಲವ್ತಾ ಚಾಮುಂಡೇಶ್ವರಿ ಪೂಜೆ
ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ
ಮೂರನೇ ದಿನ ಚಂದ್ರಘಂಟಾ ಹಾಗೂ ಕುಷ್ಮಾಂಡ
ನಾಲ್ಕನೇ ದಿನ ಸ್ಕಂದಾ ಮಾತಾ
ಐದನೇ ದಿನ ಕಾತ್ವಾಯಿನಿ
ಆರನೇ ದಿನ ಸರಸ್ವತಿ ದೇವಿ ಪೂಜೆ
ಏಳನೇ ದಿನ ದುರ್ಗಾಷ್ಟಮಿ ಸಿದ್ಧಿ ರಾತ್ರಿ
8 ನೇ ದಿನ ಮಹಾನವಮಿ ಆಯುಧ ಪೂಜೆ
9 ನೇ ದಿನ ವಿಜಯದಶಮಿ ಮೆರವಣಿಗೆ
ಈ ಬಾರಿ 9 ನೇ ದಿನಕ್ಕೆ ವಿಜಯದಶಮಿ ಮೆರವಣಿಗೆ ನಡೆಯಲಿದೆ ಎನ್ನಲಾಗಿದೆ.