Select Your Language

Notifications

webdunia
webdunia
webdunia
webdunia

ಮೈಸೂರು ಗ್ಯಾಂಗ್ ರೇಪ್ ಕೇಸ್: ಹಳೇ ಕೇಸ್ ನಿಂದ ಸಿಕ್ಕಿಬಿದ್ದ ಕಾಮುಕರು!

ಮೈಸೂರು ಗ್ಯಾಂಗ್ ರೇಪ್ ಕೇಸ್: ಹಳೇ ಕೇಸ್ ನಿಂದ ಸಿಕ್ಕಿಬಿದ್ದ ಕಾಮುಕರು!
bengaluru , ಶನಿವಾರ, 28 ಆಗಸ್ಟ್ 2021 (15:06 IST)
ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಭೂಪತಿ ಸೇರಿದಂತೆ 5 ಮಂದಿಯನ್ನು ವಶಕ್ಕೆ ಪಡೆಯಲಾ
ಗಿದೆ.
28 ವರ್ಷದ ಪ್ರಮುಖ ಆರೋಪಿ ಭೂಪತಿಯನ್ನು ತಮಿಳುನಾಡಿನ ತಾಳವಾಡಿಯಲ್ಲಿ ಬಂಧಿಸಲಾಗಿದೆ.
ಪುಡಾರಿಯಾಗಿ ಊರೂರು ತಿರುಗುವ ಭೂಪತಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯುವತಿಯ ಮೊಬೈಲ್ ಕಸಿದುಕಂಡಿದ್ದ. ಪ್ರಕರಣದ ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ.
2018ರಲ್ಲಿ ಕಳ್ಳತನ ಆಗಿದ್ದ ಮೊಬೈಲ್ ಟ್ರೇಸರ್ ಮಾಡುತ್ತಿದ್ದ ಪೊಲೀಸರು ತನಿಖೆ ನಡೆಸಿದಾಗ ಅತ್ಯಾಚಾರ ನಡೆದ ಘಟನೆಯ ಜಾಗದಲ್ಲಿ ಮೊಬೈಲ್ ಸ್ವಿಚ್ ಆನ್ ಆಗಿತ್ತು. ನಂತರ ತಮಿಳುನಾಡಿನಲ್ಲಿ ಸ್ವಿಚ್ ಆನ್ ಆಗಿತ್ತು. ಇದನ್ನು ಸೈಬರ್ ಕ್ರೈಂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ಪೊಲೀಸರ ಗಮನಕ್ಕೆ ತಂದಿದ್ದು, ಇದರ ಜಾಡು ಹಿಡಿದು ಪೊಲೀಸರು ಭೂಪತಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 46,700 ಪಾಸಿಟಿವ್, 2 ತಿಂಗಳಲ್ಲಿ ಗರಿಷ್ಠ ಜಿಗಿತ