Publish Date: Tue, 07 Nov 2023 (15:28 IST)
Updated Date: Tue, 07 Nov 2023 (14:06 IST)
ನಗರದ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕಳ್ಳತನ ಕೇಸ್ ಗಳನ್ನ ಪತ್ತೆ ಮಾಡಲಾಗಿದೆ.75 ಲಕ್ಷ ಮೌಲ್ಯದ 133 ಲ್ಯಾಪ್ ಟಾಪ್ ಪತ್ತೆ ಹಂಚಲಾಗಿದೆ.ಪಿಜಿ ಹಾಗೂ ಹಾಸ್ಟಲ್ ಗಳಲ್ಲಿ ಕಳ್ಳತನ ಮಾಡ್ತಿದ್ದ ಆಸಾಮಿ ಆಂದ್ರ ಪ್ರದೇಶ ಮೂಲದ ಎಂಬಿಎ ಪದವೀಧರನಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಆ ಬಳಿಕ ಕೆಲಸ ಬಿಟ್ಟು, ಕಳ್ಳತನ ವೃತ್ತಿಗಿಳಿದಿದ್ದ.ಆರೋಪಿ ಸೇರಿದಂತೆ ಇಬ್ಬರು ರಿಸಿವರ್ ಗಳ ಬಂಧನ ಮಾಡಲಾಗಿದೆ.
ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ಮಾಡ್ತಿದ್ದ ಅಡ್ಡೆಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದಾರೆ.12 ಕಡೆ ದಾಳಿ ನಡೆಸಿ ಹತ್ತು ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.ಕ್ರಿಕೆಟ್ ಬೆಟ್ಟಿಂಗ್ ಕೇಸ್ ಸಂಬಂಧ ಪ್ರಕರಣಗಳ ದಾಖಲು ಮಾಡಿಕೊಂಡಿದ್ದಾರೆ.