Select Your Language

Notifications

webdunia
webdunia
webdunia
webdunia

ಯುವತಿಯ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ: ಆರೋಪಿ ವಿರುದ್ಧ ಕೇಸ್ ದಾಖಲು

ಯುವತಿಯ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ: ಆರೋಪಿ ವಿರುದ್ಧ ಕೇಸ್ ದಾಖಲು
ಮಥುರಾ , ಸೋಮವಾರ, 6 ನವೆಂಬರ್ 2023 (18:16 IST)
ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದು ಹಾಕ್ತೀನಿ ಎಂದು ಯುವತಿಗೆ ಬೆದರಿಕೆಯೊಡ್ಡಿ ಆಕೆಯನ್ನು ಮನೆಗೆ ಡ್ರಾಪ್ ಮಾಡಿದ್ದಾನೆ. ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಸೆಲ್‌ಫೋನ್‌ನಲ್ಲಿ ಕ್ಯಾಬ್ ನ ಫೋಟೋ ತೆಗೆದು ನಂಬರ್ ನೋಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಗುರ್‌ಗಾಂವ್ ನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಕ್ಯಾಬ್ ಚಾಲಕನೊಬ್ಬ 25ರ ಹರೆಯದ ಮಹಿಳೆಯನ್ನು ಕ್ಯಾಬ್‌ನಲ್ಲಿ ಅತ್ಯಾಚಾರಗೈದ ಘಟನೆ ವರದಿಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
 
ಬಲ್ಲಮೂಲಗಳ ಪ್ರಕಾರ ಆರೋಪಿಯ ಹೆಸರು ಶಿವಕುಮಾರ್ ಯಾದವ್ ಎಂದು ಪತ್ತೆ ಹಚ್ಚಲಾಗಿದ್ದು, ಈತ ಸ್ವಿಫ್ಟ್ ಡಿಸೈರ್ ಕಾರ್‌ನ ಮಾಲೀಕನಾಗಿದ್ದಾನೆ.. ಈತನ ಕಾರನ್ನು ಮಥುರಾದಲ್ಲಿ ಪತ್ತೆ ಹಚ್ಚಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ  ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
 
ಎಂಎನ್‌ಸಿಯೊಂದರಲ್ಲಿ ಉದ್ಯೋಗಿಯಾಗಿರುವ 25ರ ಹರೆಯದ ಮಹಿಳೆ ರಾತ್ರಿ ಡಿನ್ನರ್ ಪಾರ್ಟಿಯೊಂದನ್ನು ಮುಗಿಸಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಸಂತ್ ವಿಹಾರ್ ವರೆಗೆ ತನ್ನ ಗೆಳೆಯ ಗೆಳತಿಯರೊಂದಿಗೆ ಬಂದ ಈಕೆ ಅಲ್ಲಿಂದ ಮನೆಗೆ ತೆರಳಲು ರಾತ್ರಿ 9.30ರ ವೇಳೆಗೆ ಕ್ಯಾಬ್ ಹತ್ತಿದ್ದಳು. ಕ್ಯಾಬ್‌ನ ಹಿಂದಿನ ಸೀಟಿನಲ್ಲಿ ಕುಳಿತ ಈಕೆಗೆ ನಿದ್ದೆ ಬಂದಿದೆ. ನಿದ್ದೆಯಿಂದ ಎದ್ದಾಗ ಆಕೆಗೆ ತಾನು ಅತ್ಯಾಚಾರಕ್ಕೊಳಗಾಗಿರುವ ವಿಷಯ ಗೊತ್ತಾಗಿದೆ. ಕಾರ್‌ನ ಡೋರ್ ಲಾಕ್ ಆಗಿದ್ದು, ಕಾರನ್ನು ರೋಹಿಲ್ಲಾ ಮತ್ತು ಇಂದ್ರಲೋಕ್ ನಡುವೆ ನಿಲ್ಲಿಸಲಾಗಿತ್ತು.
 
ಘಟನೆಯ ಬಗ್ಗೆ ಮಹಿಳೆ ದೂರು ನೀಡಿದ್ದಳು. ಈಕೆಯ ದೂರಿನ ಮೇರೆಗೆ ಸರಾಯ್ ರೋಹಿಲ್ಲಾ ಪೊಲೀಸ್ ಠಾಣೆಯಲ್ಲಿ ಕ್ಯಾಬ್  ಚಾಲಕನ ವಿರುದ್ಧ ಐಪಿಸಿ 376, 323 ಹಾಗೂ 506 ಪರಿಚ್ಛೇದದಡಿಯಲ್ಲಿ ಕೇಸು ದಾಖಲಿಸಲಾಗಿದೆ.
 
2012 ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರದ ನಂತರ ಇದೀಗ ಕ್ಯಾಬ್‌ನಲ್ಲಿ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದು, ದೆಹಲಿ ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಮತ್ತೊಮ್ಮೆ ಕೇಳುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರವನ್ನು ಕಬಳಿಸಲು ಮೋದಿ ಯಾವ ಹಂತಕ್ಕೂ ಹೋಗಬಲ್ಲರು: ಸೋನಿಯಾ ಗಾಂಧಿ