Select Your Language

Notifications

webdunia
webdunia
webdunia
webdunia

ಅಧಿಕಾರವನ್ನು ಕಬಳಿಸಲು ಮೋದಿ ಯಾವ ಹಂತಕ್ಕೂ ಹೋಗಬಲ್ಲರು: ಸೋನಿಯಾ ಗಾಂಧಿ

pm modi
dehali , ಸೋಮವಾರ, 6 ನವೆಂಬರ್ 2023 (17:14 IST)
ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಪ್ರಜಾಪ್ರಭುತ್ವದ ಕುರಿತು ಕಾಳಜಿ ಇಲ್ಲ.  ಜನರ ಕಲ್ಯಾಣ ಅವರ ಪಾಲಿಗೆ ಯಾವುದೇ ಮೌಲ್ಯವನ್ನು ಹೊಂದಿರದ ವಿಷಯ. ಸಮಾಜವನ್ನು ಒಡೆಯುವುದಕ್ಕಾಗಿ ಜನರನ್ನು ಬಳಸಿಕೊಳ್ಳುವುದು ಅವರ ನೀತಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
 
ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಸುಳ್ಳು ಹೇಳುವುದು ಒಂದು ಚಟವಾಗಿ ಬಿಟ್ಟಿದೆ. ಅವರು ವಾಗ್ದಾನಗಳನ್ನು ಮಾಡುತ್ತಾರೆ ಮತ್ತು ಅವುಗಳನ್ನು ಈಡೇರಿಸುವ ಗೊಡವೆಗೆ ಹೋಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
 
ಕಣಿವೆ ನಾಡು ಕಾಶ್ಮೀರದ ಶಂಗುಸ್ ಮತ್ತು ಅನಂತ್ ನಾಗ್‌ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರವನ್ನು ಕಬಳಿಸಲು ಬಿಜೆಪಿ ಮತ್ತು ಮೋದಿ ಯಾವ ಹಂತಕ್ಕೂ ಹೋಗಬಲ್ಲರು ಎಂದು ಅವರು ಹೇಳಿದ್ದಾರೆ.
 
ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ನಾಯಕರು ಮಾಡಿದ್ದ ಅನೇಕ ವಾಗ್ದಾನಗಳನ್ನು ಉಲ್ಲೇಖಿಸಿದ ಅವರು ಅವುಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಭೂಮಿಯನ್ನು ಸ್ವರ್ಗವಾಗಿ ಬದಲಾಯಿಸುವುದಾಗಿ ಭರವಸೆ ನೀಡಿದ್ದರು ಎಂದು ಸೋನಿಯಾ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಮಾ ಕೊಲೆ ವಿಚಾರವಾಗಿ ಮುನಿರತ್ನರನ್ನ ತನಿಖೆ ಮಾಡಬೇಕೆಂದು ಒತ್ತಾಯ