Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಬಡವರ ಪಾಲಿಗೆ ದೇವರಿದ್ದಂತೆ: ಲೋಕೇಶ್ ಚಂದ್ರ

ಪ್ರಧಾನಿ ಮೋದಿ ಬಡವರ ಪಾಲಿಗೆ ದೇವರಿದ್ದಂತೆ: ಲೋಕೇಶ್ ಚಂದ್ರ
delhi , ಸೋಮವಾರ, 6 ನವೆಂಬರ್ 2023 (11:49 IST)
ಪ್ರಧಾನಿ ಮೋದಿ ಹೊಸ ವಿಚಾರಗಳ ಗಣಿಯಾಗಿದ್ದಾರೆ. ಮೋದಿಯವರ ಪ್ರಯೋಗಶೀಲತೆ ಎದುರು ಗಾಂಧಿಯವರ ಆಲೋಚನೆಗಳು ಸಹ ಹಿಂದೆ ಉಳಿಯುತ್ತದೆ. ಮೋದಿ ಚಿಂತನೆ ಮತ್ತು ಕಾರ್ಯಗಳು ಬಡವರ ಮೇಲೆ ಕಾರ್ಲ್ ಮಾರ್ಕ್ಸ್ ಗಿಂತ  ಹೆಚ್ಚು ಪ್ರಭಾವ ಬೀರಿವೆ. ಬಡವರ ಪಾಲಿಗೆ ಮೋದಿ ದೇವರಿದ್ದಂತೆ ಎಂದುಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಲೋಕೇಶ್ ಚಂದ್ರ ಹೊಗಳಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿಯವರು 'ರಾಷ್ಟ್ರಪಿತ ಮಹಾತ್ಮಾಗಾಂಧಿಯವರಿಗಿಂತ ಶ್ರೇಷ್ಠರು, ಭಗವಂತನ ಅವತಾರವಿದ್ದಂತೆ'  ಎಂದು  ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್( ಭಾರತೀಯ ಸಂಸ್ಕೃತಿಗಳ ಸಂಬಂಧಗಳ ಸಮಿತಿ) ತಿಳಿಸಿದ್ದಾರೆ.
 
ಜನಧನ ಸೇರಿದಂತೆ ಅವರು ಜಾರಿಯಲ್ಲಿರುವ ತಂದಿರುವ ಹಲವು ಯೋಜನೆಗಳು ಇದಕ್ಕೆ ಸಾಕ್ಷಿಯಾಗಿವೆ. ಮಹಾತ್ಮಾ ಗಾಂಧಿಯವರಿಗಿಂತ  ಮೋದಿ ಶ್ರೇಷ್ಠರಾಗಿದ್ದು ಭಾರತೀಯ ಮೌಲ್ಯಗಳಿಗೆ ಅವರು ಬಹಳ ಮಹತ್ವ ನೀಡುತ್ತಾರೆ" ಎಂದು  ಮೋದಿಯವರನ್ನು ಮೀತಿ ಮೀರಿ ಕೊಂಡಾಡಿದ್ದಾರೆ.
 
ತಮ್ಮ ಮಾತುಗಳನ್ನು ಮುಂದುವರೆಸುತ್ತ" ಮೋದಿಯವರ ಹೆಸರಲ್ಲಿ ವಿದೇಶದಲ್ಲಿ ಬ್ಯಾಂಕ್ ಖಾತೆ ಇಲ್ಲ. ಅವರಿಗೆ ಮಕ್ಕಳು- ಅಳಿಯಂದಿರಾಗಲಿ ಇಲ್ಲ. ಅವರಿಗೆ ದೇಶವೇ ಕುಟುಂಬ".
 
"ನಾನು ಜೀವನಪೂರ್ತಿ ಕಾಂಗ್ರೆಸ್ ಪಕ್ಷದ ಅನುಯಾಯಿಯಾಗಿದ್ದೆ. ಅನೇಕ ಕಾಂಗ್ರೆಸ್ ನಾಯಕರ ಜತೆ ನನಗೆ ಬಹಳ ನಿಕಟ ಸಂಬಂಧವಿದೆ. ಆದರೆ ನಾನೀಗ ಮೋದಿಯವರನ್ನು ಹೊಗಳುತ್ತಿದ್ದೇನೆ. ಅವರ ವ್ಯಕ್ತಿತ್ವವೇ ಅಂತದ್ದು. ಅವರು ನೀಡಿದ ಭರವಸೆಗಳು ಕೇವಲ ಚುನಾವಣೆಯವರೆಗಷ್ಟೇ ಸೀಮಿತವಾಗಿಲ್ಲ , ಅಧಿಕಾರಕ್ಕೆ ಬಂದ ನಂತರವೂ ಅವರು ದೇಶದ ಕುರಿತು ಯೋಚಿಸುತ್ತಿದ್ದಾರೆ" ಎಂದಿದ್ದಾರೆ ಲೋಕೇಶ್ ಚಂದ್ರ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ದರೋಡೆ ಮಾಡಿ ಮನೆಗೆಲಸದವಳ ಶೀಲ ದೋಚಿದ ದುರುಳರು