Select Your Language

Notifications

webdunia
webdunia
webdunia
webdunia

ವಾಹನ ಅಪಘಾತಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಜಗಳ: ಯುವಕನ ಕೊಲೆ

ವಾಹನ ಅಪಘಾತಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಜಗಳ: ಯುವಕನ ಕೊಲೆ
ಪುತ್ತೂರು , ಮಂಗಳವಾರ, 7 ನವೆಂಬರ್ 2023 (12:15 IST)
ಪುತ್ತೂರು: ದ್ವಿಚಕ್ರ ವಾಹನ ಅಪಘಾತದ ಪರಿಹಾರವಾಗಿ ನೀಡಬೇಕಿದ್ದ ಹಣದ ವಿಚಾರದಲ್ಲಿ ಜಗಳವಾಗಿ ದ.ಕ. ಜಿಲ್ಲೆಯ ಪುತ್ತೂರಿನ ಯುವಕನ ಕೊಲೆಯಾಗಿದೆ.

26 ವರ್ಷದ ಅಕ್ಷಯ್ ಕಲ್ಲೇಗ ಕೊಲೆಗೀಡಾದಾತ. ಹುಲಿವೇಷ ತಂಡದ ಮುಖ್ಯಸ್ಥನಾಗಿದ್ದ ಈತ ಹಾಗೂ ಆರೋಪಿಗಳ ನಡುವೆ 2 ಸಾವಿರ ರೂ. ಪರಿಹಾರ ನೀಡುವ ವಿಚಾರಕ್ಕೆ ಜಗಳವಾಗಿದೆ.

ಮೂವರು ಆರೋಪಿಗಳ ಗುಂಪು ಅಕ್ಷಯ್ ನನ್ನು ನೆಹರು ನಗರದ ಜಂಕ್ಷನ್ ಬಳಿ ಅಟ್ಟಾಡಿಸಿ ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದೆ. ಈ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ